ಇಂದು ಬೆಳಿಗ್ಗೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ತಮ್ಮ ರಾಜಿನಾಮೆ ಪತ್ರವನ್ನು ನೀಡುವ ಮೂಲಕ ಶಾಸಕ ಸ್ಥಾನಕ್ಕೆ ಉಮೇಶ್ ಜಾಧವ್ ಗುಡ್ ಬೈ ಹೇಳಿದ್ದಾರೆ.
ಅತೃಪ್ತ ಶಾಸಕರ ಗುಂಪಿನಲ್ಲಿ ಕಾಣಿಸಿಕೊಂಡಿದ್ದ ಉಮೇಶ್ ಅವರು ಕಾಂಗ್ರೇಸ್ ತೊರೆಯುವುದಿಲ್ಲ ಎಂಬ ಮಾತು ಕೇಳಿಬಂದಿತ್ತು.ಆದರೆ ಮೈತ್ರಿ ಸರಕಾರದಲ್ಲಿನ ಅಸಡ್ಡೆ ಮತ್ತು ತಮ್ಮ ಕ್ಷೇತ್ರ ಕ್ಷೇತ್ರಕ್ಕೆ ಅನುಧಾನದಲ್ಲಿನ ಅಸಮಾನತೆಗೆ ಬೇಸತ್ತು ರಾಜಿನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಉಮೇಶ್ ಜಾಧವ್ ಅವರು ಬಿಜೆಪಿಯಿಂದ ಕಲಬುರಗಿ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಲೋಕಸಭಾ ಚುನಾವಣೆ ಎದುರಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಚುನಾವಣೆ ಸಮೀಪದಲ್ಲಿ ಅವರ ರಾಜಿನಾಮೆ ಕುತೂಹಲವನ್ನು ಕೆರಳಿಸಿರುವುದಂತು ಸುಳ್ಳಲ್ಲ..
Image Copyright : google.com