Bharat Jodo Yatra: 100 ನೇ ದಿನಕ್ಕೆ ಕಾಲಿಟ್ಟ ಕಾಂಗ್ರೆಸ್‌ನ ʻಭಾರತ್ ಜೋಡೋ ಯಾತ್ರೆ

congress-bharat-jodo-yatra-to-mark-day-100-with-jaipur-concert

ದೌಸಾ: ಕಾಂಗ್ರೆಸ್ ಪಕ್ಷದ ಭರತ್ ಜೋಡೋ ಯಾತ್ರೆ (Bharat Jodo Yatra) ಇಂದಿಗೆ 100 ನೇ ದಿನಕ್ಕೆ ಕಾಲಿಟ್ಟಿದೆ. ದೇಶವನ್ನು ವಿಭಜಿಸುವ ರಾಜಕೀಯದ ವಿರುದ್ಧ ಜನರನ್ನು ಒಗ್ಗೂಡಿಸುವ ಉದ್ದೇಶವನ್ನು ಇಟ್ಟುಕೊಂಡು ರಾಹುಲ್ ಗಾಂಧಿ ನೇತೃತ್ವದಲ್ಲಿ ಈ ಯಾತ್ರೆಯನ್ನು ಕಾಂಗ್ರೆಸ್ ಕೈಗೊಂಡಿದೆ.

ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ ಕಾಲ್ನಡಿಗೆಯ ಮೆರವಣಿಗೆಯು ಶುಕ್ರವಾರ ತನ್ನ 100 ದಿನಗಳನ್ನು ಪೂರೈಸಿದ್ದು, ಈ ಯಾತ್ರೆಯು ಶುಕ್ರವಾರ ರಾಜಸ್ಥಾನದ ದೌಸಾದಿಂದ ಪುನರಾರಂಭಗೊಂಡಿದೆ. ರಾಹುಲ್ ಗಾಂಧಿ, ಇತರ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಇಂದು ಬೆಳಿಗ್ಗೆ 6 ಗಂಟೆಗೆ ಮೀನಾ ಹೈಕೋರ್ಟ್ ದೌಸಾ ದಿಂದ ಪಾದಯಾತ್ರೆಯನ್ನು ಪುನರಾರಂಭ ಮಾಡಿದರು.

ಇದನ್ನೂ ಓದಿರಿ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬಿಗ್ ರಿಲೀಫ್ !

ರಾಜ್ಯಸಭಾ ಸಂಸದ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಟ್ವೀಟ್ ಮಾಡಿ, ಇಂದು ಭಾರತ್ ಜೋಡೋ ಯಾತ್ರೆಯ ಐತಿಹಾಸಿಕ ಪ್ರಯಾಣವು 100 ದಿನಗಳನ್ನು ಪೂರ್ಣಗೊಳಿಸಿದೆ. ದ್ವೇಷ, ಮತಾಂಧತೆ, ವಿಭಜನೆ, ಹಿಂಸೆ, ಅನ್ಯಾಯ, ನಿರುದ್ಯೋಗ ಮತ್ತು ಬೆಲೆ ಏರಿಕೆ ವಿರುದ್ಧ ದೇಶವನ್ನು ಒಂದು ಗೂಡಿಸುವುದು ಪಾದಯಾತ್ರೆಯ ಉದ್ದೇಶವಾಗಿದೆ. ಈ ಯಾತ್ರೆ 8 ರಾಜ್ಯಗಳು ಮತ್ತು 2,763 ಕಿಮೀ ಸಂಚರಿಸಿದ್ದು, ಲಕ್ಷಾಂತರ ಜನರ ಹೃದಯಗಳನ್ನು ಗೆದ್ದಿದೆ. ಪ್ರೀತಿ ಮತ್ತು ಸೌಹಾರ್ದತೆಗಾಗಿ ಎಲ್ಲರಿಗೂ ಧನ್ಯವಾದಗಳು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: Bank of Maharashtra Recruitment 2022: ಖಾಲಿಯಿರುವ 314 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

LEAVE A REPLY

Please enter your comment!
Please enter your name here