ಬೆಂಗಳೂರು: ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅವಕಾಶವನ್ನು ಬಳಸಿಕೊಂಡು ಖಾಸಗಿ ಸಂಸ್ಥೆ ಮತದಾರದ ಮಾಹಿತಿ ಸಂಗ್ರಹಿಸಿದ ಆರೋಪದ ಕುರಿತಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಉತ್ತರ ನೀಡಲು ನಿರಾಕರಿಸಿದ್ದಾರೆ.
ಕಾಂಗ್ರೆಸ್ ನಡೆಸುತ್ತಿರುವ ಪತ್ರಿಕಾ ಗೋಷ್ಠಿಯ ಕುರಿತಂತೆ ಮಾಹಿತಿಯನ್ನು ಪಡೆದುಕೊಂಡು, ಕಚೇರಿಗೆ ತೆರಳಿದ್ದಾರೆ. ಮತದಾರರ ಪಟ್ಟಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಈ ಸಮಯದಲ್ಲಿ ಮುಖ್ಯಮಂತ್ರಿಗಳು ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ.
ಏನು ಈ ಮತದಾರ ಪಟ್ಟಿ ಅಕ್ರಮ ?
ಮತದಾರರ ಪಟ್ಟಿ ಪರಿಷ್ಕರಣೆಗೆ ಅನುಮತಿಯನ್ನು ಪಡೆದು ಚಿಲುಮೆ ಎಂಬ ಸಂಸ್ಥೆ ಮತದಾರರ ಮಾಹಿತಿಗಳನ್ನು ಸಂಗ್ರಹಿಸಿದೆ. ಈ ಮತದಾರರ ಪಟ್ಟಿ ನವೀಕರಣ ಮಾಡುವ ಸಮಯದಲ್ಲಿ ಸರಕಾರಿ, ಅರೆ ಸರಕಾರಿ ಅಥವಾ ನಿವೃತ್ತ ಸರಕಾರಿ ನೌಕರರನ್ನು ಬಿಎಲ್ ಒ ಎಂದು ನೇಮಕ ಮಾಡಬೇಕು. ಅಲ್ಲದೇ ಈ ಬಿಎಲ್ ಒ ಗಳು ನಿಯೋಜಿಸಲಾದ ಮತಗಟ್ಟೆಯ ಮತದಾರರಾಗಿರಬೇಕು ಎಂಬ ನಿಯಮವಿದೆ. ಚಿಲುಮೆ ಸಂಸ್ಥೆ ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ತನ್ನ ಏಜೆಂಟರುಗಳಿಗೆ ಬಿಎಲ್‌ಒ ಎಂದು ನಕಲಿ ಗುರುತಿನ ಚೀಟಿ ನೀಡಿ ಮತದಾರರ ಮಾಹಿತಿ ಸಂಗ್ರಹಿಸಿದೆ. ಈ ಏಜೆಂಟ್ಗಳು ಮತದಾರರಿಂದ ಜಾತಿ, ಮಾತೃಭಾಷೆ, ವೈವಾಹಿಕ ಸ್ಥಿತಿ, ವಯಸ್ಸು, ಲಿಂಗ, ಉದ್ಯೋಗ ಮತ್ತು ಶಿಕ್ಷಣದ ವಿವರ, ಆಧಾರ್ ಸಂಖ್ಯೆ, ಫೋನ್ ಸಂಖ್ಯೆ, ವಿಳಾಸ, ಮತದಾರರ ಐಡಿ ಸಂಖ್ಯೆ ಮತ್ತು ಇಮೇಲ್ ವಿಳಾಸ ಸೇರಿದಂತೆ ಮತದಾರರ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿರಿ: ಮತದಾರರ ಪಟ್ಟಿ ನವೀಕರಣ ನೆಪದಲ್ಲಿ ದುರ್ಬಳಕೆ ಆರೋಪ: ಸಿಎಂ ರಾಜಿನಾಮೆಗೆ ಕಾಂಗ್ರೆಸ್ ಆಗ್ರಹ