ಭೂಮಿ ದುರ್ಬಳಕೆ ಆರೋಪ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪುತ್ರನ ವಿರುದ್ಧ ದೂರು ದಾಖಲು

complaint-filed-against-aicc-president-mallikarjun-kharge-and-priyank-kharge-for-alleged-land-misappropriation

ಕಲಬುರಗಿ: ಜಿಲ್ಲಾಡಳಿತ ನೀಡಿದ್ದ ಭೂಮಿಯನ್ನು ದುರ್ಭಳಕೆ ಮಾಡಿಕೊಂಡ ಆರೋಪ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ಅವರ ಪುತ್ರ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಲೋಕಾಯುಕ್ತ (Lokayukta) ಕಚೇರಿಯಲ್ಲಿ ದೂರು ದಾಖಲಾಗಿದೆ.

ಅಂಬೇಡ್ಕರ್ ಸ್ಮಾರಕ ಸಮೀತಿಗೆ ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ 1981ರಲ್ಲಿ ಕಲಬುರಗಿ ಜಿಲ್ಲಾಡಳಿತವು 36 ಸಾವಿರ ಚದರ್ ಅಡಿ ಭೂಮಿ ನೀಡಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ಕಲ್ಯಾಣ ಮಂಟಪ ಸಾರ್ವಜನಿಕ ಬಳಕೆಗೆ ನೀಡದೆ ಅಲ್ಲಿ ಕರ್ನಾಟಕ ಪಿಪಲ್ಸ್ ಎಜುಕೇಶನ್ ಸೊಸೈಟಿ ಕಚೇರಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿರಿ: BIGG BOSS ಮನೆಯಿಂದ ಹೊರ ಬಂದ ಅರುಣ್ ಸಾಗರ್: ಟ್ರೋಫಿ ಗೆಲ್ಲುವ ಕನಸು ಭಗ್ನ

ಮಲ್ಲಿಕಾರ್ಜುನ್ ಖರ್ಗೆ, ಕರ್ನಾಟಕ ಪಿಪಲ್ಸ್ ಎಜುಕೇಶನ್ ಸೊಸೈಟಿಯ ಸ್ಥಾಪಕ ಅಧ್ಯಕ್ಷರಾಗಿದ್ದರು. ಸದ್ಯ ಅವರು ಯಾವುದೇ ಅಧಿಕಾರವನ್ನು ಈ ಸಂಸ್ಥೆಯಲ್ಲಿ ಹೊಂದಿಲ್ಲ ಆದರೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಸದಸ್ಯತ್ವವನ್ನು ಹೊಂದಿದ್ದಾರೆ. ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಭೂಮಿಯನ್ನು ದುರ್ಭಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಮಣಿಕಂಠ ರಾಠೋಡ್ ಎಂಬುವವರು ಲೋಕಾಯುಕ್ತಕ್ಕೆ ದೂರನ್ನು ನೀಡಿದ್ದಾರೆ.

ಇದನ್ನೂ ಓದಿರಿ: ಸೈನಿಕರ ಒನ್ ರ‍್ಯಾಂಕ್ ಒನ್ ಪೆನ್ಶನ್‌ ಪರಿಷ್ಕರಿಸಲು ಕೇಂದ್ರ ಸಚಿವ ಸಂಪುಟ ಅಸ್ತು

LEAVE A REPLY

Please enter your comment!
Please enter your name here