ವಿಷ್ಣುವರ್ಧನ್ ಸ್ಮಾರಕ । cm-bommai-to-open-vishnuvardhan-memorial-on-december-18

ಮೈಸೂರು: ಭವ್ಯವಾಗಿ ನಿರ್ಮಾಣವಾಗಿರುವ ದಿವಂಗತ ನಟ ಡಾ. ವಿಷ್ಣುವರ್ಧನ್ ಅವರ ಸ್ಮಾರಕವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಡಿಸೆಂಬರ್ 18 ರಂದು ಉದ್ಘಾಟಿಸಲಿದ್ದಾರೆ.

11 ಕೋಟಿ ವೆಚ್ಚದಲ್ಲಿ ಎಚ್.ಡಿ.ಕೋಟೆ ರಸ್ತೆಯ ಹಾಲಾಳು ಗ್ರಾಮದ ಬಳಿ ಐದು ಎಕರೆ ಜಾಗದಲ್ಲಿ 1,450 ಚದರ ಮೀಟರ್‌ನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಇನ್ನು ಕೆಲವು ಕೊನೆಯ ಹಂತದ ತಯಾರಿಗಳು ನಡೆಯಬೇಕಿದೆ. ಅವೆಲ್ಲವನ್ನು ಶೀಘ್ರವೇ ಪೂರ್ಣಗೊಳಿಸಿ, ಸ್ಮಾರಕವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುತ್ತುದೆ ಎಂದು ಮಾಹಿತಿ ತಿಳಿದುಬಂದಿದೆ.

ದಿವಂಗತ ನಟ ಡಾ. ವಿಷ್ಣುವರ್ಧನ್ ಅವರ ಸ್ಮಾರಕದಲ್ಲಿ ಸಿನಿ ಪಯಣದ ಗ್ಯಾಲರಿ, ಪುಸ್ತಕಗಳು ಮತ್ತು ಅವರಿಗೆ ಸಂಬಂಧಿಸಿದ ವಸ್ತುಗಳ ಸಂಗ್ರಹ ಇರಲಿದೆ. ಅಲ್ಲದೇ ಸ್ಮಾರಕದಲ್ಲಿ 20 ಅಡಿಯ ಪ್ರತಿಮೆಯನ್ನೂ ನಿರ್ಮಾಣ ಮಾಡಲಾಗಿದೆ.

ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು 15 ಸೆಪ್ಟೆಂಬರ್ 2020 ರಂದು ಸ್ಮಾರಕಕ್ಕೆ ಅಡಿಪಾಯ ಹಾಕಿದ್ದರು. ಬರೋಬ್ಬರಿ 13 ವರ್ಷಗಳ ನಂತರ ಸ್ಮಾರಕ ನಿರ್ಮಾಣ ಪೂರ್ಣಗೊಳ್ಳುತ್ತಿದೆ.

ಇದನ್ನೂ ಓದಿರಿ: ‘ಸತ್ಯ’ ಧಾರಾವಾಹಿ ಖ್ಯಾತಿಯ ಸಾಗರ್ ಬಿಳಿಗೌಡ ಮದುವೆಯಂತೆ ಹುಡುಗಿ ಯಾರು ಗೊತ್ತೇ?

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here