ರಾಜ್ಯದಲ್ಲಿ ಜುಲೈ 5ರ ನಂತರ ಅನ್ ಲಾಕ್ 3.0 ಜಾರಿ ? ಮುಖ್ಯಮಂತ್ರಿ ನೇತೃತ್ವದಲ್ಲಿ ಇಂದು ಸಭೆ !

i-am-ready-to-resign-if-high-command-insists-says-cm-b-s-yedyurappa

ಬೆಂಗಳೂರು: ಕೋವಿಡ್ 2ನೇ ಅಲೆಯ ಪ್ರಮಾಣ ರಾಜ್ಯಾದ್ಯಂತ ಇಳಿಕೆಯಾಗಿರುವುದರಿಂದ ಅನ್ ಲಾಕ್ 3.0 ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಲಿದ್ದು, ಈ ಬಗ್ಗೆ ಶನಿವಾರ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನಿಸುವ ಸಾಧ್ಯತೆಯಿದೆ.

ರಾಜ್ಯದಲ್ಲಿ ಸೋಮವಾರದ ನಂತರ ಇನ್ನಷ್ಟು ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಂದು ಸಂಜೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಅನ್ ಲಾಕ್ 3.0 ಸಭೆ ನಡೆಯಲಿದ್ದು, ಕೋವಿಡ್ ಉಸ್ತುವಾರಿ ಸಚಿವರು, ತಜ್ಞರು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಅದರಲ್ಲಿ ಕೋವಿಡ್ ತಾಂತ್ರಿಕ ಸಮಿತಿ ನೀಡಿರುವ ವರದಿಯನ್ನು ಆಧರಿಸಿ ಯಾವುದಕ್ಕೆಲ್ಲಾ ವಿನಾಯ್ತಿ ನೀಡಬೇಕೆಂದು ನಿರ್ಧರಿಸಿ ಇಂದೇ ಮುಖ್ಯಮಂತ್ರಿಗಳು ಹೊಸ ಮಾರ್ಗಸೂಚಿ ಹೊರಡಿಸಲಿದ್ದಾರೆ ಎಂದು ತಿಳಿದುಬಂದಿದೆ.

ಸೋಮವಾರದಿಂದ ಬೆಂಗಳೂರು ಸಂಪೂರ್ಣ ಅನ್ ಲಾಕ್ ಆಗುವ ಸಾಧ್ಯತೆಯಿದೆ. ಆರ್ಥಿಕ ಚಟುವಟಿಕೆ ದೃಷ್ಟಿಯಿಂದ ಎಲ್ಲಾ ಚಟುವಟಿಕೆಗಳನ್ನು ತೆರೆಯಬೇಕಾಗಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ. ಸರ್ಕಾರಕ್ಕೆ ಕೋವಿಡ್ ನಿರ್ಬಂಧನೆಯಡಿ ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಬಿಬಿಎಂಪಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಸೋಮವಾರ ಅಂದರೆ ಜುಲೈ 5ರಿಂದ ಮಾಲ್ ಗಳು, ದೊಡ್ಡ ದೊಡ್ಡ ಹೊಟೇಲ್ ಗಳು ತೆರೆಯುವ ಸಾಧ್ಯತೆಯಿದೆ. ವೀಕೆಂಡ್ ಕರ್ಫ್ಯೂವನ್ನು ತೆರವುಗೊಳಿಸಿ ನೈಟ್ ಕರ್ಫ್ಯೂವನ್ನು ಮಾತ್ರ ಸರ್ಕಾರ ಮುಂದುವರಿಸುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here