ತಿರುವನಂತಪುರಂ : ಇಂದು ಬೆಳಗಿನ ಜಾವ 3.45 ರ ಸುಮಾರಿಗೆ ಬಿಂದು ಮತ್ತು ಕನಕದುರ್ಘಾ ಎಂಬುವ 50 ವರ್ಷದ ಮಹಿಳೆಯರಿಬ್ಬರು ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲವನ್ನು ಪ್ರವೇಶಿಸಿದ ಹಿನ್ನೆಲೆಯಲ್ಲಿ ಕೇರಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಹರಸಾಹಸ ವ್ಯಕ್ತಪಡಿಸಿದ್ದಾರೆ.
ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಇಂದು ಕಣ್ಣೂರು ವಿಶ್ವವಿಧ್ಯಾನಿಲಯದ ಕಾಲೇಜು ಅಧ್ಯಾಪಕಿಯಾಗಿರುವ ಬಿಂದು ಮತ್ತು ಅಂಗಡಿಪುರಂನ ನಾಗರಿಕ ಪೂರೈಕೆ ಇಲಾಖೆಯಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿರುವ ಕನಕದುರ್ಗ ಎಂಬ ಇಬ್ಬರು ಮಹಿಳೆಯರು ದೇವಾಲಯ ಪ್ರವೇಶ ಮಾಡಿದ್ದಾರೆ. ಪೋಲಿಸ್ ಬಿಗಿಭದ್ರತೆಯಲ್ಲಿ ಹೋಗಿ ಪವಿತ್ರ ಹದಿನೆಂಟು ಮೆಟ್ಟಿಲುಗಳನ್ನು ಹತ್ತದೇ ಬದ್ರತಾ ಮಾರ್ಗದ ಮೂಲಕ ಅಯ್ಯಪ್ಪನ ದರ್ಶನ ಪಡೆದಿದ್ದರೆ ಎಂದು ತಿಳಿದುಬಂದಿದೆ.

ಈ ಸುದ್ದಿ ವೈರಲ್ ಆಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸ್ಥಳದಲ್ಲಿ ಕಲ್ಲುತೂರಾಟ ನಡೆದಿದೆ. ದೇವಸ್ವ ಮಂಡಳಿ ಮತ್ತು ತಂತ್ರಿಗಳ ನೇತ್ರತ್ವದಲ್ಲಿ ದೇವಾಲಯವನ್ನು ಬಂದ್ ಮಾದಲಾಯಿತಲ್ಲದೆ, ಶುದ್ಧಿಕರನಗೊಳಿಸಿ ಮತ್ತೆ ಬಕ್ತರ ಪ್ರವೇಶಕ್ಕೆ ತೆರವುಗೊಳಿಸಲಾಯಿತು. 800 ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯಕ್ಕೆ ಚ್ಯುತಿಬಂದ ಹಿನ್ನೆಲೆಯಲ್ಲಿ ಕಲ್ಲುತೂರಾಟ, ಪ್ರತಿಬಟನೆ ಸೇರಿದಂತೆ ತೀವ್ರ ವಿರೋದ ವ್ಯಕ್ತವಾಗಿದೆ.
ಇದನ್ನೂ ಓದಿರಿ : ಧಾರ್ಮಿಕ ಭಾವನೆಗೆ ಧಕ್ಕೆ: ರೆಹನಾ ಪಾತಿಮಾ ಅರೆಸ್ಟ್…!
ಈ ಘಟನೆಯು ಕೇರಳ ಸರಕಾರದ ಪಿತೂರಿಯಾಗಿದ್ದು, ಇದಕ್ಕೆಲ್ಲ ಸರಕಾರವೇ ಹೊಣೆಯೆಂದು ಬಿಜೆಪಿ ಆರೋಪಿಸಿದ್ದು, ಹಿಂದೂ ಸಂಘಟನೆಗಳು ಸೇರಿ ಬಿಜೆಪಿ ಪ್ರತಿಭಟನೆಯನ್ನು ತೀವ್ರಗೊಳಿಸಿದೆ. ಅಲ್ಲದೇ ಈ ದಿನವನ್ನು ಕಪ್ಪು ದಿನವಾಗಿ ಘೋಷಿಸಿದ್ದು, ಎರಡು ದಿನ ಕೇರಳದಾದ್ಯಂತ ಉಗ್ರ ಪ್ರತಿಭಟನೆಗೆ ಕರೆ ನಿಡಿದೆ.

Image Copyright : google.com