civil-aviation-minister-hardeep-singh-puri-announced-domestic-flight-service-will-be-resumed-from-25-may

ಕೊರೊನಾ ಸೋಂಕಿನಿಂದಾಗಿ ದೇಶದಲ್ಲಿ ನಾಲ್ಕನೆಯ ಬಾರಿ ಲಾಕ್ ಡೌನ್ ಘೋಷಣೆ ಮುಂದುವರೆದಿದೆ. ಈ ನಡುವೆಯೇ ಸರಕಾರ ನಿಧಾನವಾಗಿ ಸಡಿಲಿಕೆಯನ್ನು ನೀಡುತ್ತಾ ಮೊದಲಿನ ಸ್ಥಿತಿಗೆ ತರಲು ಪ್ರಯತ್ನಿಸುತ್ತಿದೆ. ಈಗಾಗಲೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಪ್ರಾರಂಭಿಸಿದ್ದು, ನಿಧಾನವಾಗಿ ರೈಲು ಮತ್ತು ದೇಶೀಯ ವಿಮಾನ ಸೇವೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ ಎಂದು ಕೇಂದ್ರ ನಾಗರೀಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಇನ್ನು ದೇಶೀಯ ವಿಮಾನ ಹಾರಾಟವನ್ನು ನಡೆಸಲು ಮೇ 25 ರ ಒಳಗೆ ಎಲ್ಲ ತಯಾರಿಗಳನ್ನು ಮಾಡಿಕೊಳ್ಳಲಾಗುವುದು. ಅಲ್ಲದೇ ಮುಂದೆ ವಿಮಾನ ಯಾನವನ್ನು ಪ್ರಾರಂಭಿಸಿದ ನಂತರ ಸಾಮಾಜಿಕ ಅಂತರ ಸೇರಿದಂತೆ ಕೇಂದ್ರ ಆರೋಗ್ಯ ಸಚಿವಾಲಯದ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು ಎಂದು ಅವರು ತಿಳಿಸಿದರು.

ಹೊಸ ವಿಮಾನ ಮಾರ್ಗಗಳಿಗೆ ಒಪ್ಪಿಗೆ 

ನಮ್ಮ ಸರಕಾರ ಹೊಸ ವಿಮಾನ ಮಾರ್ಗಗಳನ್ನು ತೆರೆಯಲು ಅವಕಾಶವನ್ನು ಕಲ್ಪಿಸಿದೆ. ಇದರಿಂದ 20-25% ಸಮಯದ ಉಳಿತಾಯ ಆಗಲಿದೆ. ಸರಕಾರ ದೇಶೀಯ ಮತ್ತು ವಿದೇಶಿ ಮಾರ್ಗಗಳ ಕುರಿತು ಮಾತುಕತೆ ನಡೆಸಿಕೊಂಡರೆ ಹಾರಾಟದ ಸಮಯವನ್ನು ಕಡಿಮೆಮಾಡಬಹುದು.

civil-aviation-minister-hardeep-singh-puri-announced-domestic-flight-service-will-be-resumed-from-25-may
ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಪ್ರಕಾರ ದೆಹಲಿಯಿಂದ ಮುಂಬೈಗೆ ಪ್ರಯಾಣಿಸಲು ಸಧ್ಯ ಎರಡು ಗಂಟೆ ಹತ್ತು ನಿಮಿಷ ತೆಗೆದುಕೊಳ್ಳುತ್ತಿದ್ದೇವೆ, ಆದರೆ ನೆರವಾದ ಮಾರ್ಗಕ್ಕೆ ಅವಕಾಶ ಸಿಗುವುದರಿಂದ ಕೇವಲ 35 ನಿಮಿಷಗಳಲ್ಲಿ ತಲುಪಬಹುದು ಎಂದು ಹೇಳಿದ್ದಾರೆ. ಇದೆ ರೀತಿ ವಿದೇಶ ತಾಣಗಳನ್ನು ತಲುಪಲು ಹೊಸ ಮಾರ್ಗಗಳ ಕುರಿತು ಮಾತುಕತೆ ನಡೆಸಿಕೊಂಡಲ್ಲಿ ಸಮಯದ ಉಳಿತಾಯ ಸಾಧ್ಯ ಎಂಬ ಅಭಿಪ್ರಾಯವನ್ನು ಅವರು ತಿಳಿಸಿದ್ದಾರೆ.

ಇದನ್ನೂ ಓದಿರಿ: ಕಾಶ್ಮೀರ ಭಾರತದ ಅವಿಭಾಜ್ಯಅಂಗ: ಈ ವಿಷಯದಲ್ಲಿ ಪಾಕಿಸ್ತಾನಕ್ಕೆ ನಮ್ಮ ಬೆಂಬಲ ಇಲ್ಲ

LEAVE A REPLY

Please enter your comment!
Please enter your name here