ಲಡಾಕ್ ಗಡಿಯಲ್ಲಿ ಚೀನಿ ಸೈನಿಕರಿಗೆ ಚಳಿಯ ಹೊಡೆತ : 5000 ಕ್ಕೂ ಹೆಚ್ಚು ಸೈನಿಕರು ಆಸ್ಪತ್ರೆಗೆ

chinese-pla-casualty-evacuation-spotted-in-north-bank-area-of-pangong-tso

ಲಡಾಕ್ : ಗಡಿ ಪ್ರದೇಶದಲ್ಲಿ ಸೇನೆ ಜಮಾವಣೆ ಮಾಡಿರುವ ಚೀನಾ ಸದ್ಯ ಚಳಿಯ ಹೊಡೆತಕ್ಕೆ ಸಿಲುಕಿ ನಡುಗುತ್ತಿದೆ. ಪಾಂಗಾಂಗ್ ತ್ಸೋ ಸಮೀಪದಲ್ಲಿ ತೀವ್ರವಾಗಿ ಹಿಮಪಾತವಾಗುತ್ತಿದ್ದು, ಚಳಿಗೆ ಹಲವಾರು ಸೈನಿಕರು ಆಸ್ಪತ್ರೆ ಸೇರಿದ್ದಾರೆ.

ಈ ಪ್ರದೇಶದಲ್ಲಿನ ಹವಾಮಾನವು ರಾತ್ರಿಗಳಲ್ಲಿನ ಘನೀಕರಿಸುವ ಹಂತಕ್ಕಿಂತ ಗಣನೀಯವಾಗಿ ಕೆಳಗಿರುತ್ತದೆ, ಇದು ಗಡಿ ಭಾಗದಲ್ಲಿನ ಸಾವುನೋವುಗಳನ್ನು ಹೆಚ್ಚಿಸಲು ಕಾರಣವಾಗಬಹುದು. ಸುಮಾರು 5,000 ಚೀನೀ ಸೈನಿಕರು 15,000-16,000 ಅಡಿ ಎತ್ತರದಲ್ಲಿನ ಶಿಖರಗಳನ್ನು ಏರಿಕೊಂಡು ಕುಳಿತಿದ್ದಾರೆ. ಇದರಿಂದಾಗಿ ಚಳಿಯ ತೀವ್ರತೆಗೆ ಹಲವು ಸೈನಿಕರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.

ಈ ಮರಗಟ್ಟುವ ಚಳಿಯಿಂದಾಗಿ ಹಲವು ಸೈನಿಕರು ಅನಾರೋಗ್ಯಕ್ಕೆ ಒಳಗಾಗುದ್ದು, ಸ್ಟ್ರೆಚರ್ ಸಹಾಯದಿಂದ ಹಲವು ಸೈನಿಕರನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ದೃಶ್ಯ ಕಂಡುಬರುತ್ತಿದೆ ಎಂದು ಸೇನಾ ಮೂಲಗಳು ವರದಿ ಮಾಡಿವೆ. ಈ ಐದು ಸಾವಿರ ಸೈನಿಕರಲ್ಲಿ ಈಗಾಗಲೇ ಹಲವಾರು ಅನಾರೋಗ್ಯಕ್ಕೆ ತುತ್ತಾಗಿದ್ದು, ಇನ್ನೂ ಹಲವಾರು ಈ ಸಮಸ್ಯೆಗೆ ಸಿಲುಕಲಿದ್ದಾರೆ.

ಭಾರತವು ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿ 44 ಕ್ಕಿಂತಲೂ ಹೆಚ್ಚಿನ ಸೇತುವೆಗಳನ್ನು ಸೇನೆಯ ಸಲುವಾಗಿ ನಿರ್ಮಿಸಿ, ಬಳಕೆಗೆ ಅವಕಾಶ ನೀಡಲಾಗಿದೆ. ಇದರಿಂದ ಬೆಚ್ಚಿಬಿದ್ದ ಚೀನಾ ವಾಸ್ತವ ನಿಯಂತ್ರಣ ರೇಖೆಯ (LAC) ಉದ್ದಕ್ಕೂ 60,000 ಸೈನಿಕರನ್ನು ನಿಯೋಜಿಸಿದೆ ಎಂದು ಮಾಹಿತಿ ಬಹಿರಂಗವಾಗಿದೆ.

LEAVE A REPLY

Please enter your comment!
Please enter your name here