ಗುಜರಾತ್: ಇತ್ತೀಚೆಗೆ ಚೀನಾದಿಂದ ಭಾರತಕ್ಕೆ ಹಿಂದಿರುಗಿದ್ದ ವ್ಯಕ್ತಿಗೆ ಕೋವಿಡ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿದೆ. ಈತನ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ಗಾಂಧಿನಗರದ ಲ್ಯಾಬ್‌ಗೆ ಕಳುಹಿಸಲಾಗಿದೆ.
ಗುಜರಾತಿನ ಭಾವನಗರದ ನಿವಾಸಿಯಾಗಿರುವ 34 ವರ್ಷದ ಉದ್ಯಮಿ ಕೆಲಸದ ನಿಮಿತ್ತ ಚೀನಾಕ್ಕೆ ತೆರಳಿದ್ದರು. ಅವರು ಡಿಸೆಂಬರ್ 19 ರಂದು ಭಾರತಕ್ಕೆ ಆಗಮಿಸಿದ್ದರು. ಕೋವಿಡ್ ಹರಡುವುದನ್ನು ತಡೆಯಲು ಗುಜರಾತ್ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಭಾವನಗರ ಪಾಲಿಕೆಯು ನಗರದಲ್ಲಿ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಿದೆ.
ಗುಜರಾತಿನ ಆರೋಗ್ಯ ಸಚಿವ ಋಷಿಕೇಶ್ ಪಟೇಲ್ ಬುಧವಾರ ರಾಜ್ಯಕ್ಕೆ ಇತರ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕಡ್ಡಾಯ ಪರೀಕ್ಷೆಯನ್ನು ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಲ್ಲಿಯವರೆಗೆ, ಭಾರತವು ಓಮಿಕ್ರಾನ್ ನ ರೂಪಾಂತರ BF.7ನ ನಾಲ್ಕು ಪ್ರಕರಣಗಳನ್ನು ವರದಿಯಾಗಿವೆ. ಈ ಮಾದರಿಯು ಸದ್ಯ ಚೀನಾದಲ್ಲಿ ಕೋವಿಡ್ ಸ್ಥಿತಿಯನ್ನು ಉಲ್ಬಣ ಮಾಡಿದೆ. ಗುಜರಾತ್‌ನಲ್ಲಿ ಎರಡು ಹೊಸ ವ್ಯತ್ಯಯ ಪ್ರಕರಣಗಳು ಪತ್ತೆಯಾಗಿವೆ.
ಇದನ್ನೂ ಓದಿರಿ: ರಾಷ್ಟ್ರೀಯ ಗಣಿತ ದಿನದ ಸಮಯದಲ್ಲಿ ಪ್ರಖ್ಯಾತ ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ ಅವರ ನೆನಪು