china-admits-casualties-commanding-officer-was-killed-in-galwan-clash

ಪೂರ್ವ ಲಡಾಖ್ ನ ಗಡಿಭಾಗವಾದ ಗಲ್ವಾನ್ ಕಣಿವೆಯಲ್ಲಿ ಜೂನ್ 15 ರಂದು ಭಾರತ-ಚೀನಾ ಸೈನಿಕರ ನಡುವೆ ಗಡಿಭಾಗದ ಕುರಿತು ಘರ್ಷಣೆ ನಡೆದಿತ್ತು. ಈ ಸಂದರ್ಭದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅದೇ ರೀತಿ ಚೀನಾ ಸೈನಿಕರಿಗೂ ಹಾನಿಯಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಕುತಂತ್ರಿ ಚೀನಾ ಇದುವರೆಗೂ ಈ ಕುರಿತು ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ.

ಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರಂತೆ ಚೀನಾ ಸೈನಿಕರೂ ಸಾವಿಗೀಡಾಗಿದ್ದಾರೆ ಎಂದು ಭಾರತೀಯ ಸೇನೆ ಹೇಳಿದರೂ ಈ ವಿಷಯವನ್ನು ಚೀನಾ ಕಮ್ಯುನಿಸ್ಟ್ ಸರಕಾರ ಮುಚ್ಚಿಟ್ಟಿತ್ತು. ಆದರೆ ಸೇನಾಮಟ್ಟದ ಮಾತುಕತೆಯ ವೇಳೆಯಲ್ಲಿ ಚೀನಾದ ಕಮಾಂಡಿಂಗ್ ಅಧಿಕಾರಿಯೊಬ್ಬರು ಮೃತಪಟ್ಟಿರುವುದನ್ನು ಅಧಿಕ್ರತವಾಗಿ ಒಪ್ಪಿಕೊಂಡಿದ್ದಾರೆ.

ಈ ಘರ್ಷಣೆಯಲ್ಲಿ ತಮ್ಮ ಸೈನಿಕರೂ ಸಾವನ್ನಪ್ಪಿದ್ದಾರೆ ಎಂದು ಒಪ್ಪಿಕೊಂಡಿರುವ ಚೀನಾ, ಎಷ್ಟು ಜನರು ಸಾವನ್ನಪ್ಪಿದ್ದಾರೆ ಎನ್ನುವ ಸಂಖ್ಯೆಯನ್ನು ಬಿಟ್ಟುಕೊಟ್ಟಿಲ್ಲ. ಈ ಮಾಹಿತಿಯನ್ನು ಬಹಿರಂಗ ಪಡಿಸುವುದರಿಂದ ಭಾರತ ಮುಜುಗರ ಮತ್ತು ಒತ್ತಡಕ್ಕೆ ಒಳಗಾಗುತ್ತದೆ. ಇದು ಶಾಂತಿ ಮಾತುಕತೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ನೆಪ ಹೇಳಿದೆ.

LEAVE A REPLY

Please enter your comment!
Please enter your name here