ಬಿಗ್ ಬಾಸ್-5 ರ ಸ್ಪರ್ಧಿಗಳಾದ ಕನ್ನಡ ರಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರೂ ಇಷ್ಟ ಪಟ್ಟಂತೆ ಇಂದು ಗೃಹಸ್ಥಾಶ್ರಮಕ್ಕೆ ಶಾಸ್ತ್ರೋಕ್ತವಾಗಿ ಕಾಲಿಟ್ಟರು.
ಬಿಗ್ ಬಾಸ್ ಮನೆಯಲ್ಲಿದ್ದಾಗ ಉತ್ತಮ ಸ್ನೇಹಿತರಾಗಿದ್ದ ಇವರು ನಂತರ ಪ್ರೀತಿಯಲ್ಲಿ ಬಿದ್ದಿದ್ದರು. ಕಳೆದ ಯುವ ದಸರಾ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದಾಗ ಚಂದನ್ ತಮ್ಮ ಪ್ರೇಮ ನಿವೇದನೆ ಮಾಡಿದ್ದರು. ಇಬ್ಬರ ಪ್ರೇಮವನ್ನು ಅರಿತು ಎರಡೂ ಕುಟುಂಬಸ್ತರು ಸೇರಿ ಮದುವೆಯನ್ನು ನಿಶ್ಚಯಿಸಿದ್ದರು.
ಇಂದು ನಡೆದ ದಾರೆ ಮುಹೂರ್ತದಲ್ಲಿ ವರ ಚಂದನ್ ರಷ್ಮೆ ಪಂಚೆ ಮತ್ತು ಶಲ್ಯ ತೊಟ್ಟು ಮಿಂಚುತ್ತಿದ್ದರೆ, ಕೆಂಪು ಮತ್ತು ಹಸಿರು ಬಣ್ಣಗಳ ಕಾಂಬಿನೇಶನ್ ಇರುವ ರೇಶ್ಮೆ ಸೀರೆಯುಟ್ಟು, ಚಿನ್ನಾಭರಣಗಳಿಂದ ಸಿಂಗರಿಸಿಕೊಂಡು ವಧು ನಿವೇದಿತಾ ಕಂಗೊಳಿಸಿದರು.
ಮದುವೆಯ ನಂತರ ಮಾತನಾಡಿದ ಚಂದನ್ ಶೆಟ್ಟಿ,” ಬಹಳ ಕುಶಿಯಾಗುತ್ತಿದೆ, ಇದು ನನ್ನ ಜೀವನದಲ್ಲಿಯೇ ಮರೆಯಲಾಗದ ದಿನ. ಮದುವೆ ಬಗ್ಗೆ ನಾನೇನು ಕನಸು ಕಂಡಿದ್ದೇನೋ ಹಾಗೆ ನೆರವೇರಿದೆ” ಎಂದು ಹೇಳಿದರು.
ಇದನ್ನೂ ಓದಿರಿ: ಐಸಿಸಿ ಟೆಸ್ಟ್ ರಾಂಕಿಂಗ್ ಪಟ್ಟಿ ಪ್ರಕಟ : ಮೊದಲ ಸ್ಥಾನ ಕಳೆದುಕೊಂಡ ಕೊಹ್ಲಿ
ನಿವೇದಿತಾ ಗೌಡ ಅವರು ” ಇಷ್ಟ ಪಟ್ಟ ಹುಡುಗನನ್ನು ಮದುವೆಯಾಗಿ ತುಂಬಾ ಕುಶಿಯಾಗಿದೆ. ನಮ್ಮ ಮದುವೆಗೆ ಬಂದು ಹರಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಹೇಳಿದರು.