ಚಾಮಾರಾಜ ನಗರದ ಸುಳ್ವಾಡಿಯ ಮಾರಮ್ಮ ದೇವಿಯ ವಿಷ ಪ್ರಸಾದಕ್ಕೆ ಬಲಿಯಾದವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಇಲ್ಲಿಯವರೆಗೆ ಒಟ್ಟು 13 ಜನರು ಸಾವನ್ನಪ್ಪಿದ್ದಾರೆ.
ನಿನ್ನೆ ತಡರಾತ್ರಿ ಅಫಾಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗೇಶ್ವರಿ(35) ಮತ್ತು ಸಾಲಮ್ಮ(35) ಸಾವನ್ನಪ್ಪುವ ಮೂಲಕ ಈ ದುರಂತ ಪ್ರಕರಣದಲ್ಲಿ 13 ಮಂದಿ ಸಾವನ್ನಪ್ಪಿದಂತೆ ಆಗಿದೆ. ಅಲ್ಲದೇ ಸಾವನ್ನಪ್ಪಿದವರನ್ನು ಅವಿನಾಶ(7), ಅನಿತಾ(13), ಶಾಂತರಾಜು (25), ರಾಚಯ್ಯ (35), ಶಿವು(35), ಗೋಪಿಯಮ್ಮ(40), ದೊಡ್ಡ ಮಾದಯ್ಯ(42), ಅಣ್ಣಯ್ಯಪ್ಪ ತಮಡಿ(45), ಶಕ್ತಿ ವೇಲು (45), ಕೃಷ್ಣನಾಯಕ್(50), ಪಾಪಣ್ಣ(70) ಎಂದು ಗುರುತಿಸಲಾಗಿದೆ. ಅಫಾಲೋ ಆಸ್ಪತ್ರೆಯೊಂದರಲ್ಲೇ 40 ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಹಲವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂದಿಸಿದಂತೆ ಕೊಳ್ಳೆಗಾಲ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ಪ್ರಸಾದಕ್ಕೆ ವಿಷ ಹಾಕಿರುವ ಆರೋಪದ ಮೇಲೆ ಇಬ್ಬರನ್ನು ಬಂದಿಸಿ ವಿಚಾರಣೆ ನಡೆಸುತ್ತಿದ್ದಾರೆ.
Image Copyright: google.com