centres-7-new-defence-companies-will-be-huge-base-for-military-power-says-pm-modi

ನವದೆಹಲಿ: ನರೇಂದ್ರ ಮೋದಿ ದೇಶದ ಪ್ರಧಾನಿಯಾದಾಗಿಂದಲೂ ದೂರದೃಷ್ಟಿಯ ಆಡಳಿತವನ್ನು ಮಾಡಿಕೊಂಡೇ ಬಂದಿದ್ದಾರೆ. ಅದರಲ್ಲಿಯೂ ಸೇನಾಪಡೆಯ ವಿಚಾರದಲ್ಲಿ ಹೆಚ್ಚಿನ ಗಮನವನ್ನು ನೀಡಿದ್ದು, ಪ್ರತಿವರ್ಷ ಬಜೆಟ್ ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಅನುಧಾನವನ್ನು ಸಹ ನೀಡುತ್ತಿದ್ದಾರೆ. ಇವುಗಳೊಂದಿಗೆ ಸೇನೆಯ ಹಲವು ದಿನಗಳ ಬೇಡಿಕೆಗಳನ್ನು ಪೂರೈಸಲು ಸಹ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ.

ನರೇಂದ್ರ ಮೋದಿಯವರ ರಾಜಕೀಯ ಮುಂದಾಳತ್ವದಲ್ಲಿ ಸೇನೆ ಪಾಕಿಸ್ತಾನ ಮತ್ತು ಚೀನಾ ಗಡಿಗಳಲ್ಲಿ ತನ್ನ ನಿಜವಾದ ಶಕ್ತಿಯನ್ನು ತೋರಿಸುತ್ತಿದೆ. ಭಾರತೀಯ ಗಡಿಗಳಲ್ಲಿ ಸೇನೆ ಈ ಧೈರ್ಯ ತೋರಲು ನರೇದ್ರಮೋದಿಯವರ ಸುಭದ್ರ ಆಡಳಿತವೂ ಒಂದು ಕಾರಣ ಎಂದರೆ ತಪ್ಪಾಗಲಾರದು. ಇದಲ್ಲದೇ ಸೇನೆಯ ಬೇಡಿಕೆಯಲ್ಲಿದ್ದ ಬುಲೆಟ್ ಪ್ರೂಪ್ ಜಾಕೆಟ್, ಹೊಸ ತಂತ್ರಜ್ಞಾನದಲ್ಲಿ ತಯಾರಾದ ಬಂದೂಕುಗಳು, ಯುದ್ಧ ವಿಮಾನಗಳು, ಮದ್ದು-ಗುಂಡು ಮತ್ತು ಕ್ಷಿಪಣಿಗಳನ್ನು ಸರಕಾರ ಪೂರೈಸಲು ಹಲವು ಒಪ್ಪಂದಗಳನ್ನು ಮಾಡಿಕೊಂಡು ಪೂರೈಸುತ್ತಿದೆ.

ಅದರಂತೆ ರಕ್ಷಣಾ ಕ್ಷೇತ್ರದ ಹಳೆಯ ಮತ್ತು ನಷ್ಟದಲ್ಲಿದ್ದ ಅರ್ಡಿನವ್ ಫ್ಯಾಕ್ಟರಿ ಬೋರ್ಡ್ ಅನ್ನು ಸರಕಾರ ಬರ್ಖಾಸ್ತು ಮಾಡಿತ್ತು. ಈ ಮೂಲಕ ಸರಕಾರದ ಬೊಕ್ಕಸದಿಂದ ಹರಿದು ಹೋಗುತ್ತಿದ್ದ ಹಣವನ್ನು ತಡೆಹಿಡಿಯಲಾಯಿತು. ಇದಲ್ಲದೆ ಅದೇ ಸಮಯದಲ್ಲಿ ಆಧುನಿಕ ಜಗತ್ತಿನ ಹೊಸ ಚಾಲೆಂಜ್ ಗಳಿಗೆ ಅನುಗುಣವಾಗುವಂತಹ ಮತ್ತು ಟೈಂಪೌಂಡ್ ಆಗಿ ಕಾರ್ಯ ನಿರ್ವಹಿಸುವಂಥ 7 ಕಂಪನಿಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು.

ಇದನ್ನೂ ಓದಿರಿ: FSSAI Recruitment 2021 : 233 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರಕಾರದ ಬೊಕ್ಕಸವನ್ನು ಕಾಲಿಮಾಡುತ್ತ ಬಿಳಿಯಾನೆಗಳಂತೆ ಬೆಳೆದುಕೊಂಡಿದ್ದ ರಕ್ಷಣಾ ಕ್ಷೇತ್ರದ ಹಳೆಯ ಕಂಪನಿಗಳನ್ನು ಬಂದ್ ಮಾಡಿದ್ದ ನರೇಂದ್ರಮೋದಿ ಇಂದು ವಿಜಯದಶಮಿ ದಿನ ಹೊಸದಾದ 7 ರಕ್ಷಣಾ ಕ್ಷೇತ್ರದ ಕಂಪನಿಗಳನ್ನು ದೇಶಕ್ಕೆ ಅರ್ಪಿಸುವ ಮೂಲಕ ಹೊಸ ತಂತ್ರಜ್ಞಾನ ಅಭಿವೃದ್ಧಿಗೆ ಮುಂದಾಗಲು ಸಿದ್ಧತೆ ನಡೆಸಿದ್ದಾರೆ.

ಹೊಸ 7 ಕಂಪನಿಗಳು ಯಾವವು ?

ಮುನಿಷನ್ ಇಂಡಿಯಾ ಲಿಮಿಟೆಡ್, ಅರ್ಮರ್ಡ್ ವೆಹಿಕಲ್ ನಿಗಮ್ ಲಿಮಿಟೆಡ್, ಅಡ್ವಾನ್ಸ್ ವೆಪನ್ಸ್ ಅಂಡ್ ಇಷ್ಮೆಂಟ್ ಇಂಡಿಯಾ ಲಿಮಿಟೆಡ್, ಗ್ರೂಪ್ ಕಂಫರ್ಟ್‌ ಲಿಮಿಟೆಡ್, ಯಂತ್ರ ಇಂಡಿಯಾ ಲಿಮಿಟೆಡ್, ಇಂಡಿಯಾ ಆಫೈಲ್ ಲಿಮಿಟೆಡ್, ಗೈಡರ್‌ ಇಂಡಿಯಾ ಲಿಮಿಟೆಡ್ ಎಂಬ 7 ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ.

ನರೇಂದ್ರ ಮೋದಿಯವರು, ವಿಜಯದಶಮಿ ಅಂಗವಾಗಿ ನಡೆದ ಕಾರ್ಯಕ್ರಮದ ಉದ್ಘಾಟನಾ ಸಮಯದಲ್ಲಿ ಮಾತನಾಡಿ, ಸಂಶೋಧನೆ ಮತ್ತು ಹೊಸ ತಂತ್ರಜ್ಞಾನಕ್ಕೆ ಹೊಸ ಕಂಪನಿಗಳು ಆದ್ಯತೆಯನ್ನು ನೀಡಬೇಕು. ಈ ಕಂಪನಿಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡುವಂತೆ ಹೊಸ ಸ್ಟಾರ್ಟ್ ಅಪ್ ಗಳಿಗೆ ಒತ್ತಾಯಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿರಿ: 300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅಬ್ಬರಿಸಿದ ಬಹುನಿರೀಕ್ಷಿತ ಕೋಟಿಗೊಬ್ಬ-3

centres-7-new-defence-companies-will-be-huge-base-for-military-power-says-pm-modi

ಸ್ವಾತಂತ್ರ್ಯಾ ನಂತರ ರಕ್ಷಣಾ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆಯಲ್ಲಿ ದೇಶ ಹಿಂದುಳಿಯಿತು. ಶಸ್ತ್ರಾಸ್ತ್ರ ಕಾರ್ಖಾನೆಗಳನ್ನು ಮೇಲ್ದರ್ಜೆಗೆ ಏರಿಸುವ ಮತ್ತು ಹೊಸತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಅವಶ್ಯಕೆಯಿತ್ತು. ನಮ್ಮ ಸ್ವಾವಲಂಭನೆ ಮತ್ತು ರಕ್ಷಣಾ ಕ್ಷೇತ್ರದ ಶಕ್ತಿಯನ್ನು ಹೆಚ್ಚಿಸುವ ಕುರಿತು ಯಾವುದೇ ಗಮನವನ್ನು ನೀಡದಿರುವುದು ಬೇಸರದ ಸಂಗತಿ. ಇದೀಗ ರಕ್ಷಣಾ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಇದು ಹಿಂದೆಂದಿಗಿಂತಲೂ ಪಾರದರ್ಶಕತೆ ಮತ್ತು ವಿಶ್ವಾಸವನ್ನು ಹೆಚ್ಚಿಸಿದೆ.  ರಕ್ಷಣಾ ಕ್ಷೇತ್ರದಲ್ಲಿ ಆಧುನಿಕತೆಯನ್ನು ತರುವ ಉದ್ಧೇಶದಿಂದ 41 ಆರ್ಡಿನೆನ್ಸ್ ಕಾರ್ಖಾನೆಗಳನ್ನು ಏಳು ಕಾರ್ಪೊರೇಟ್ ಸಂಸ್ಥೆಗಳಾಗಿ ಪರಿವರ್ತಿಸಲಾಗುತ್ತಿದೆ.

ಸ್ವಾವಲಂಭಿ ಭಾರತ ಮತ್ತು ವಿಶ್ವದ ಅತಿದೊಡ್ಡ ಮಿಲಿಟರಿ ಶಕ್ತಿಯನ್ನಾಗಿ ಮಾಡುವುದು ನಮ್ಮ ಸರಕಾರದ ಆಧ್ಯತೆಯಾಗಿದೆ. ಇದರೊಂದಿಗೆ ಮಿಲಿಟರಿ ಉಧ್ಯಮವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಅಂತೆಯೇ, ‘ಕಳೆದ ಏಳು ವರ್ಷಗಳಲ್ಲಿ, ‘ಮೇಕ್ ಇನ್ ಇಂಡಿಯಾ’ ಮಂತ್ರದೊಂದಿಗೆ ಈ ಸಂಕಲ್ಪವನ್ನು ಮುಂದುವರಿಸಲು ದೇಶವು ಕೆಲಸ ಮಾಡಿದೆ. ಭಾರತವು ಸ್ವಾತಂತ್ರ್ಯದ 75 ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ, ದೀರ್ಘಕಾಲದವರೆಗೆ ಸ್ಥಗಿತಗೊಂಡಿದ್ದ ಯೋಜನೆಗಳನ್ನು ಪೂರ್ಣಗೊಳಿಸಲಾಗುತ್ತಿದೆ ಎಂದು ಹೇಳಿದರು.

ದೇಶ ಸ್ವಾತಂತ್ರ್ಯಗೊಂಡು 75 ವರ್ಷಗಳು ಸಂದಿಸಿರುವ ಈ ಸಮಯದಲ್ಲಿಯಾದರು ರಕ್ಷಣಾ ಕ್ಷೇತ್ರದಲ್ಲಿ ಅಭೂತಪೂರ್ವ ಬೆಳವಣಿಗೆ ಉಂಟಾಗುವಂತಾಗಲಿ. ಮುಂದುವರೆದ ದೇಶಗಳಂತೆ ಭಾರತವೂ ರಕ್ಷಣಾ ಉಪಕರಣಗಳ ರಫ್ತು ಮಾಡುವಂತೆ ಆಗಲಿ. ಈ ಮೂಲಕ ವಿಶ್ವದ ಭಲಿಷ್ಟ ಸೇನಾ ಶಕ್ತಿಯಾಗಿ ಬೆಳೆಯಲಿ ಎಂಬುವುದು ನಮ್ಮೆಲ್ಲರ ಆಶಯ..

ಇದನ್ನೂ ಓದಿರಿ: “ಶಮೀವೃಕ್ಷ”ವನ್ನು ಅದೇಕೆ ವಿಜಯ ದಶಮಿಯ ದಿನ ಪೂಜೆ ಮಾಡುತ್ತಾರೆ ? ಅದರ ಹಿಂದಿನ ರಹಸ್ಯ ತಿಳಿಯಿರಿ

LEAVE A REPLY

Please enter your comment!
Please enter your name here