ಬೆಂಗಳೂರು: ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರಿ ವೈರಸ್ ಪತ್ತೆಯಾದ ಜಿಲ್ಲೆಗಳಲ್ಲಿ ತಕ್ಷಣ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಿ ಎಂದು ಕರ್ನಾಟಕ ಸರಕಾರಕ್ಕೆ ಕೇಂದ್ರ ಒತ್ತಾಯಿಸಿದೆ.
ಡೆಲ್ಟಾ ಪ್ಲಸ್ ವೈರಸ್ ಮೈಸೂರಿನಲ್ಲಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಗುಂಪು ಸೇರುವುದನ್ನು ತಡೆಗಟ್ಟುವುದು, ಸೋಂಕಿತರ ಮಾಹಿತಿ ಕಲೆಹಾಕುವುದು ಮತ್ತು ಲಸಿಕಾ ಅಭಿಯಾನವನ್ನು ಹೆಚ್ಚಿಸುವ ಮೂಲಕ ಸೋಂಕನ್ನು ನಿಯಂತ್ರಿಸುವ ಕ್ರಮಗಳನ್ನು ಕೈಗೊಳ್ಳಬೇಕು. ಈ ವೈರಸ್ ವೇಗವಾಗಿ ಹರಡುವ ಮತ್ತು ನೇರವಾಗಿ ಶ್ವಾಸಕೋಶಕ್ಕೆ ದಾಳಿಮಾಡುವ ಭಯಾನಕ ಶಕ್ತಿಯನ್ನು ಹೊಂದಿದೆ. ಆದ್ದರಿಂದ ತಕ್ಷಣ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಕರ್ನಾಟಕ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿರಿ: ಪಾನ್ – ಆಧಾರ್ ಜೋಡಣೆ ಬಗ್ಗೆ ಗುಡ್ ನ್ಯೂಸ್, ಮತ್ತೆ 3 ತಿಂಗಳು ಅವಧಿ ವಿಸ್ತರಣೆ
ಕೇಂದ್ರದಿಂದ ಕರ್ನಾಟಕ ಸೇರಿದಂತೆ ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರ ವೈರಸ್ ಪತ್ತೆಯಾದ ಉಳಿದ ಏಳು ರಾಜ್ಯಗಳಿಗೂ ಶೀಘ್ರ ಕ್ರಮಕೈಗೊಳ್ಳುವಂತೆ ಪತ್ರವನ್ನು ಬರೆಯಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿರಿ: ಕೊರೊನಾ ಲಸಿಕೆ ತೆಗೆದುಕೊಂಡ ಬಳಿಕ ತೋಳು ನೋವು ಬರಲು ಕಾರಣವೇನು? ಆ ನೋವನ್ನು ಕಡಿಮೆ ಮಾಡುವುದು ಹೇಗೆ?