225ಮೀಟರ್ ಆಳದ ಕಲ್ಲಿದ್ದಲು ಗಣಿ ಪ್ರವೇಶಿಸಿ ಪರಿಶೀಲನೆ ನಡೆಸಿದ ಸಚಿವ ಪ್ರಲ್ಹಾದ್ ಜೋಶಿ

ಸಚಿವ ಪ್ರಲ್ಹಾದ್ ಜೋಶಿ ।

ಕೋಲ್ಕತ್ತಾ: 225 ಮೀಟರ್‌ ಆಳದ ಭೂಗತ ಕಲ್ಲಿದ್ದಲು ಗಣಿ ಝಾಂಜ್ರಾ (Jhanjra Coal Mine) ಒಳಗೆ ಪ್ರವೇಶಿಸಿದ ಮೊದಲ ಸಚಿವ ಎಂಬ ಹೆಗ್ಗಳಿಕೆಗೆ ಪ್ರಹ್ಲಾದ್‌ ಜೋಶಿ ಅವರು ಪಾತ್ರರಾಗಿದ್ದಾರೆ.

ಪಶ್ಚಿಮ ಬಂಗಾಳ (West Bengal) ರಾಜ್ಯದ ಪಶ್ಚಿಮ್ ಬರ್ದಮಾನ್ ಜಿಲ್ಲೆಯ ದುರ್ಗಾಪುರ್ ಸಬ್ ಡಿವಿಷನ್‌ನಲ್ಲಿರುವ ಝಾಂಜ್ರಾ ಕಲ್ಲಿದ್ದಲು ಗಣಿಗೆ ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ (Coal Minister Pralhad Joshi)ನವೆಂಬರ್ 24 ರಂದು ಭೇಟಿ ನೀಡಿದ್ದರು. ಭೂಮಿಯ ಮೇಲ್ಮೈನಿಂದ 225 ಮೀಟರ್‌ ಆಳದಲ್ಲಿರುವ ದೇಶದ ಅತೀ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ಮತ್ತು ಭೂಮಿಯ ಆಳದಲ್ಲಿ 1.5 ಕಿ. ಮೀ. ದೂರ ಪ್ರಯಾಣಿಸಿ ಪರಿಶೀಲನೆಯನ್ನು ನಡೆಸಿದರು.

ಇದನ್ನೂ ಓದಿರಿ: ಉಚಿತ ವಿದ್ಯುತ್ ಬದಲು ಜನರು ಆದಾಯಗಳಿಸುವ ಸಮಯವಿದು – ನರೇಂದ್ರ ಮೋದಿ

ಈ ಸಮಯದಲ್ಲಿ ಕೇಂದ್ರ ಸಚಿವರು ಮಾತನಾಡಿ, ಈಸ್ಟರ್ನ್‌ಕೋಲ್‌ನ ಝಂಜ್ರಾ ಭೂಗತ ಗಣಿಯೊಳಗೆ 225 ಮೀಟರ್ ಆಳಕ್ಕೆ ತೆರಳಿ ಅಂಡರ್ ಗ್ರೌಂಡ್‌ನಲ್ಲಿ ಒಂದೂವರೆ ಕಿ.ಮೀ. ಪ್ರಯಾಣಿಸಿದ್ದು, ಹೊಸ ಅನುಭವ ನೀಡಿದೆ ಎಂದರು. ವರ್ಷಕ್ಕೆ 3.5 ಮಿಲಿಯನ್ ಟನ್ ಸಾಮರ್ಥ್ಯ ಹೊಂದಿರುವ ಝಂಜ್ರಾ ಕಲ್ಲಿದ್ದಲು ಗಣಿ, ಭಾರತದ ಅತಿ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ಯಾಂತ್ರೀಕೃತ ಭೂಗತ ಗಣಿಯಾಗಿದೆ. ಇಷ್ಟೊಂದು ಆಳಕ್ಕೆ ಹೋಗಿ ಪ್ರತಿ ನಿತ್ಯ ಕಷ್ಟಕರ ಪರಿಸ್ಥಿತಿಗಳನ್ನ ಎದುರಿಸಿ ಕಲ್ಲಿದ್ದಲು ಉತ್ಪಾದನೆಗೆ ಶ್ರಮಿಸುತ್ತಿರುವ ಕಾರ್ಮಿಕರಿಗೆ ಪ್ರಹ್ಲಾದ್ ಜೋಶಿಯವರು ಇದೇ ವೇಳೆ ಅಭಿನಂದನೆ ಸಲ್ಲಿಸಿದರು. ಇಲ್ಲಿನ ಕಾರ್ಮಿಕರು ಯೋಧರ ರೀತಿಯಲ್ಲಿ ಕೆಲಸ ಮಾಡ್ತಿದ್ದಾರೆ ಎಂದು ಕೇಂದ್ರ ಸಚಿವರು ಇದೇ ವೇಳೆ ಶ್ಲಾಘನೆ ವ್ಯಕ್ತಪಡಿಸಿದರು.

ದೇಶದಲ್ಲಿ ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸುವ ಮಹತ್ವದ ಗುರಿಯನ್ನು ಹೊಂದಿರುವ ಪ್ರಹಲ್ಲಾದ್ ಜೋಶಿಯವರು ಕಲ್ಲಿದ್ದಲು ಗಣಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಕಲ್ಲಿದ್ದಲು ಉತ್ಪಾದನಾ ಸಾಮರ್ಥ್ಯವನ್ನು ವರ್ಷಕ್ಕೆ 2MT ಗಿಂತಲೂ ಹೆಚ್ಚಿಗೆ ಮಾಡಲಾಗಿದೆ. ಅಲ್ಲದೇ ಕಡಿಮೆ ಎತ್ತರದ 2 ಗಣಿಗಳನ್ನು ಪರಿಚಯಿಸುವ ಮೂಲಕ 5MTY ಸಾಮರ್ಥ್ಯದ ಕಲ್ಲಿದ್ದಲು ನಿರ್ವಹಣೆ ಸ್ಥಾವರ ಹಾಗೂ ರೈಲ್ವೇ ಕಾರಿಡಾರ್ ನಿರ್ಮಾಣ ಹಂತದಲ್ಲಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಇದೇ ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿರಿ: ‘ಸತ್ಯ’ ಧಾರಾವಾಹಿ ಖ್ಯಾತಿಯ ಸಾಗರ್ ಬಿಳಿಗೌಡ ಮದುವೆಯಂತೆ ಹುಡುಗಿ ಯಾರು ಗೊತ್ತೇ?

LEAVE A REPLY

Please enter your comment!
Please enter your name here