central-govt-relief-fund-release-1200-crore
Image Credit: google.com

ಬೆಂಗಳೂರು: ರಾಜ್ಯದ ಭೀಕರ ನೆರೆಹಾವಳಿಗೆ ಕೇಂದ್ರ ಸರಕಾರ ಅಂತೂ ಪರಿಹಾರವನ್ನು ಘೋಷಣೆ ಮಾಡಿದೆ. ರಾಜ್ಯಕ್ಕೆ ಗೃಹ ಮಂತ್ರಿ ಅಮಿತ್ ಷಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಂದು ಸಮೀಕ್ಷೆಯನ್ನು ಮಾಡಿ ಹೋಗಿದ್ದರೂ ಪರಿಹಾರ ಘೋಷಣೆಗೆ ವಿಳಂಬವಾಗಿತ್ತು.

ಕೇಂದ್ರದ ಈ ವಿಳಂಬ ನೀತಿಗೆ ರಾಜ್ಯದಲ್ಲಿ ತೀವ್ರ ಆಕ್ರೋಷ ವ್ಯಕ್ತವಾಗುತ್ತಿದ್ದಂತೆ ಕೇಂದ್ರ 1200 ಕೋಟಿ ರೂಪಾಯಿಗಳನ್ನು ಮಧ್ಯಂತರ ಪರಿಹಾರ ಧನವನ್ನು ಘೋಷಿಸಿದೆ. ಪ್ರವಾಹಕ್ಕೆ ತುತ್ತಾಗಿ ತಿಂಗಳುಗಳೇ ಕಳೆದರೂ ಕೇಂದ್ರದಿಂದ ಪರಿಹಾರ ಬರದೆ ಇರುವುದು ಬಿಜೆಪಿ ಮತದಾರರಿಗೂ ಬೇಸರ ತರಿಸಿತ್ತು.

ಕೇಂದ್ರದಿಂದ ಪರಿಹಾರವನ್ನು ತರುವಲ್ಲಿ ರಾಜ್ಯದ ಸಂಸದರು ವಿಫಲರಾಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಚಕ್ರವರ್ತಿ ಸೂಲಿಬೆಲೆಯವರು ಧ್ವನಿಎತ್ತಿದ್ದನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿರಿ:ಬಾಲಾಕೋಟ್ ಮೇಲೆ ನಡೆಸಿದ ಏರ್ ಸ್ಟ್ರೈಕ್ ನ ರೋಮಾಂಚನಕಾರಿ ವಿಡಿಯೋ ಬಿಡುಗಡೆ

LEAVE A REPLY

Please enter your comment!
Please enter your name here