cbse class-xii-results-will-be-decided-on-the-basis-of-performance-in-class-10class-11-class-12

ನವದೆಹಲಿ: ಹತ್ತನೆ ತರಗತಿ, ಹನ್ನೊಂದನೆ ತರಗತಿ ಮತ್ತು 12ನೆ ತರಗತಿಯ ಅಂಕಗಳನ್ನು ಆಧರಿಸಿ 30:30:40 ಮಾನದಂಡದ ಆಧಾರದ ಮೇಲೆ ಸಿಬಿಎಸ್‍ಇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ತಿಳಿಸಿದೆ.

ಸಿಬಿಎಸ್‍ಇ ದ್ವಿತೀಯ ಪಿಯುಸಿ ಫಲಿತಾಂಶವನ್ನು 30:30:40 ಸೂತ್ರವನ್ನು ಅಳವಡಿಸಿಕೊಂಡು ಅಂದರೆ ಹತ್ತನೆ ತರಗತಿ, ಹನ್ನೊಂದನೆ ತರಗತಿ ಮತ್ತು 12ನೇ ತರಗತಿಯ ಆಂತರಿಕ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳನ್ನು ಗಣನೆಗೆ ತೆಗೆದುಕೊಂಡು 12ನೇ ತರಗತಿಯ ಅಂಕವನ್ನು ಪ್ರಕಟಿಸಲಾಗುವುದು.

ಇದನ್ನೂ ಓದಿರಿ: ವಿದ್ಯಾರ್ಥಿಗಳೇ ಗಮನಿಸಿ: ಎಸ್ಎಸ್ಎಲ್‌ಸಿ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

ಈ ಸೂತ್ರದ ಮೂಲಕ ನೀಡಲಾದ ಅಂಕಗಳಿಂದ ತೃಪ್ತರಾಗದ ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗದ ತೀವ್ರತೆ ಕಡಿಮೆಯಾದ ನಂತರ 12 ನೇ ತರಗತಿಯ ಪರೀಕ್ಷೆ ನಡೆಸಲಾಗುತ್ತದೆ. ಇದರಿಂದಾಗಿ ಯಾವುದೇ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವುದಿಲ್ಲ ಎಂದರು. 12 ನೇ ತರಗತಿ ವಿದ್ಯಾರ್ಥಿಗಳಿಗೆ ಈ ಬಾರಿ ಗ್ರೇಡ್ ಹೇಗೆ ನೀಡಲಾಗುತ್ತದೆ ಎಂಬ ಸುಪ್ರೀಂ ಕೋರ್ಟ್ ಪ್ರಶ್ನೆಗೆ ಈ ರೀತಿಯಾಗಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ನ್ಯಾಯಪೀಠಕ್ಕೆ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here