cauvery-sankramana-at-thalacauvery-in-bhagamandala

ಕೊಡಗು: ಇಂದು ತಲಕಾವೇರಿಯ ಭಾಗಮಂಡಲದಲ್ಲಿ 7 ಗಂಟೆ 3 ನಿಮಿಷದ ಕನ್ಯಾಲಗ್ನದಲ್ಲಿ ಕಾವೇರಿ ತೀರ್ಥೋದ್ಭವವಾಗಿದೆ. ಕೊರೋನಾ ಮುನ್ನೆಚ್ಚರಿಕೆಯಾಗಿ ಕೆಲವೇ ಜನರಿಗೆ ತೀರ್ಥೋದ್ಭವದ ಸಮಯದಲ್ಲಿ ಅವಕಾಶ ನೀಡಲಾಗಿತ್ತು.

ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಪೂಜಾ ಕೈಂಕರ್ಯವನ್ನು ಗೋಪಾಲ್ ಕೃಷ್ಣ ಆಚಾರ್ ಪುರೋಹಿತರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳನ್ನು ಪೂರೈಸಲಾಯಿತು. ಈ ಸಮಯದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಗೆ ತಡೆ ಒಡ್ಡಲಾಗಿತ್ತು. ದೇವಾಲಯದ ಅರ್ಚಕರು, ಸಿಬ್ಬಂಧಿಗಳು, ಉಸ್ತುವಾರಿ ಸಚಿವರು ಮತ್ತು ಕೆಲವೇ ಕೆಲವು ಅಧಿಕಾರಿಗಳಿಗೆ ಅವಕಾಶ ನೀಡಲಾಗಿತ್ತು.

ಇದನ್ನೂ ಓದಿರಿ: ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾಗೆ ವಿದ್ಯುಕ್ತ ಚಾಲನೆ

ತೀರ್ಥೋದ್ಭವದ ಸಮಯದಲ್ಲಿ ತೀರ್ಥ ಸ್ವೀಕಾರಕ್ಕೆ ಸಾರ್ವಜನಿಕರಿಗೆ ತಡೆ ಹೇರಲಾಗಿದ್ದು, ತೀರ್ಥ ವಿತರಣೆಗೆ ಐದು ಕೌಂಟರ್ ತೆರೆಯಲಾಗಿತ್ತು. ಕೌಂಟರ್ ಸುತ್ತ ಜನ ಸೇರದಂತೆ ತಡೆಯಲು ಎರಡರಿಂದ ಮೂರು ಕೊಳಾಯಿಗಳನ್ನು ಇಟ್ಟು ತೀರ್ಥ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೊರ ಜಿಲ್ಲೆ ಮತ್ತು ರಾಜ್ಯದ ಜನರಿಗೆ ಕೊರೋನಾ ನೆಗೆಟಿವ್ ವರಧಿಯನ್ನು ತರುವುದು ಕಡ್ಡಾಯವಾಗಿತ್ತು. ಈ ಎಲ್ಲ ಮುಂಜಾಗ್ರತಾ ಕ್ರಮಗಳೊಂದಿಗೆ ಸಂಭ್ರಮದ ಕಾವೇರಿ ತೀರ್ಥೋದ್ಭವ ಕಾರ್ಯಕ್ರಮವು ಜರುಗಿತು.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here