bypoll-result-bjp-leaderscelebrate-at-cm-residence-in-bengaluru-as-trends-show-the-party-leading-on-both-the-seats

ಜಿದ್ದಿಗೆ ಬಿದ್ದಂತೆ ಗೆಲ್ಲಲೇ ಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ ಸ್ಪರ್ಧಿಸಿದ್ದ ಆರ್.ಆರ್.ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮತಎಣಿಕೆ ಕಾರ್ಯ ನಡೆಯುತ್ತಿದೆ. ಸದ್ಯ ನಡೆದ ಆರ್ ಆರ್ ನಗರದ 14 ನೇ ಸುತ್ತು ಮತ್ತು ಶಿರಾ ಕ್ಷೇತ್ರದ 12 ನೇ ಸುತ್ತಿನ ಅಂತ್ಯದ ವೇಳೆಗೆ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಬಿಜೆಪಿಗೆ ಪ್ರತಿಷ್ಠೆಯ ಚುನಾವಣೆಯಾಗಿದ್ದ ಈ ಕದನ, ಎರಡೂ ಕ್ಷೇತ್ರಗಳಲ್ಲಿ ಉತ್ತಮವಾಗಿ ಪ್ರಚಾರವನ್ನು ನಡೆಸಿತ್ತು. ಇದಲ್ಲದೆ ಚುನಾವಣೋತ್ತರ ಸಮೀಕ್ಷೆಗಳು ಸಹ ಬಿಜೆಪಿ ಜಯಗಳಿಸಿದೆ ಎಂದು ತಿಳಿಸಿತ್ತು. ಇಂದು ಮತಎಣಿಕೆ ಪ್ರಾರಂಭವಾದಾಗಿನಿಂದಲೂ ಬೆಂಗಳೂರಿನ ಆರ್ ಆರ್ ನಗರ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆಯನ್ನು ಸಾಧಿಸಿತ್ತು. 14 ಸುತ್ತಿನ ಅಂತ್ಯದ ವೇಳೆಗೆ ಬಿಜೆಪಿ (ಮುನಿರತ್ನ) 73,932 ಮತಗಳನ್ನು ಪಡೆದುಕೊಂಡಿದೆ. ಇದರಂತೆಯೇ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಡಿಕೆ ರವಿ ಪತ್ನಿ ಕುಸುಮಾ ಅವರು 39,415 ಮತಗಳನ್ನು ಪಡೆದುಕೊಂಡಿದ್ದು, ಜೆಡಿಎಸ್ ನ ಕೃಷ್ಣಮೂರ್ತಿಯವರು 4,660 ಮತಗಳನ್ನು ಗಳಿಸಿದ್ದಾರೆ. ಇದರೊಂದಿಗೆ ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಅವರು 34,517 ಮತಗಳ ಅಂತರದಿಂದ ಮುಂದಿದ್ದಾರೆ.

ಇನ್ನು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ 12 ನೇ ಸುತ್ತಿನ ಅಂತ್ಯದ ವೇಳೆಗೆ ಬಿಜೆಪಿಯ ಅಭ್ಯರ್ಥಿ ರಾಜೇಶ್ ಗೌಡ ಅವರು 37,808 ಮತಗಳನ್ನು ಪಡೆದುಕೊಂಡಿದ್ದು, ಕಾಂಗ್ರೆಸ್ ನ ಟಿಬಿ ಜಯಚಂದ್ರ ಅವರಿಗೆ 29,938 ಮತಗಳು ಬಂದಿವೆ. ಇನ್ನು ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಗೆ 19,522 ಮತಗಳು ಬಂದಿವೆ. ಇದರೊಂದಿಗೆ ಶಿರಾ ಕ್ಷೇತ್ರದಲ್ಲಿಯೂ ಸಹ ಬಿಜೆಪಿ 7,870 ಮತಗಳ ಅಂತರವನ್ನು ಕಾಯ್ದುಕೊಂಡಿದೆ.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here