ಕೊನೆಯುಸಿರೆಳೆದ ಬುಲೆಟ್ ಪ್ರಕಾಶ್ : ಹಾಗೆ ಉಳಿದ ಹಲವಾರು ಕನಸು..!

bullet-prakash-died-before-he-full-fill-his-dream

ಕನ್ನಡ ಚಿತ್ರರಂಗದ ಪ್ರಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯ ಸಮಸ್ಯೆ ಉಂಟಾಗಿ ಹಲವು ದಿನಗಳಿಂದ ಬಳಲುತ್ತಿದ್ದು, ಇಂದು ಕೊನೆಯುಸಿರೆಳೆದರು. ಇಷ್ಟು ಚಿಕ್ಕ ವಯಸ್ಸಿನಲ್ಲೇ (44 ವರ್ಷ) ಕಿಡ್ನಿ ಮತ್ತು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ಎಪ್ರಿಲ್ 2 ರಂದು ಅವರ ಜನ್ಮದಿನವಾಗಿತ್ತು, ಆದರೆ ಆಸ್ಪತ್ರೆ ಸೇರಿದ್ದ ಅವರು ಹಿಂದಿನಂತೆ ಮತ್ತೆ ಸಾವನ್ನು ಗೆದ್ದು ಬರುತ್ತಾರೆ ಎಂಬ ಕನಸು ಹುಸಿಯಾಯಿತು.

ರವಿಚಂದ್ರನ್ ನೀರ್ದೆಶನದ ‘ಶಾಂತಿ ಕ್ರಾತಿ’ಯ ಮೂಲಕ ಚಿತ್ರರಂಗದ ಜೀವನ ಪ್ರಾರಂಭಿಸಿದ ಇವರು, ಒಂದು ಕಾಲದಲ್ಲಿ ದಿನಕ್ಕೆ ಮೂರೂ ಚಿತ್ರಗಳಲ್ಲಿ ನಟಿಸುವಷ್ಟು ಹೆಸರನ್ನು ಗಳಿಸಿದ್ದರು. ಸ್ಯಾಂಡಲ್ ವುಡ್ ನ ಪ್ರಖ್ಯಾತ ನಾಯಕ ನಟರ ಜೊತೆಯಲ್ಲಿ ಅಭಿನಯ ಮಾಡಿದ್ದ ಇವರು, ಚಿತ್ರರಂಗದಲ್ಲಿ ಇನ್ನೂ ಹೆಸರು ಮಾಡಬೇಕು ಎಂಬ ಹೆಬ್ಬಯಕೆಯನ್ನು ಇಟ್ಟುಕೊಂಡಿದ್ದರು.

ದರ್ಶನ್ ಸಿನಿಮಾ ನಿರ್ಮಾಣದ ಕನಸು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಬುಲೆಟ್ ಪ್ರಕಾಶ್ ಹಳೆಯ ಕಾಲದಿಂದಲೂ ಒಬ್ಬರಿಗೊಂಬ್ಬರು ಗೆಳೆಯರಾಗಿದ್ದವರು. ಬುಲೆಟ್ ತಾವು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಬೇಕು ಮತ್ತು ಅದು ದರ್ಶನ್ ಸಿನಿಮಾ ನಿರ್ಮಾಣದೊಂದಿಗೆ ಪ್ರಾರಂಭಿಸಬೇಕೆಂದು ಕನಸು ಕಂಡಿದ್ದರು. ದರ್ಶನ್ ಅವರಿಗಾಗಿಯೇ ತಮಿಳಿನ ಪೂಜೈ ಸಿನಿಮಾ ರಿಮೇಕ್ ಮಾಡಲು ಹೊರಟಿದ್ದರು, ಆದರೆ ಯಾವುದೋ ಕಾರಣಗಳಿಂದ ದರ್ಶನ್ ಮತ್ತು ಇವರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಯಿತು. ಈ ಕಾರಣಗಳಿಂದ ಆ ಚಿತ್ರ ಪುನಿತ್ ಪಾಲಾಯಿತು. ಮೊದಲು ದರ್ಶನ್ ಸಿನಿಮಾ ನಿರ್ಮಾಣ ಮಾಡಬೇಕೆಂಬ ಕನಸು ಹಾಗೆಯೇ ಉಳಿದುಹೋಯಿತು.

bullet-prakash-died-before-he-full-fill-his-dream

ಜೀವನದಲ್ಲಿ ಹಲವಾರು ಗುರಿ ಮತ್ತು ನಿರೀಕ್ಷೆ ಇತ್ತು

ಇವರು ಯಾವುದೇ ಗಾಡ್ ಪಾದರ್ ಇಲ್ಲದೆ, ತಮ್ಮ ವಿಶೇಷ ಶೈಲಿಯ ಅಭಿನಯದಿಂದ ಚಿತ್ರರಂಗದಲ್ಲಿ ಮೇಲೆದ್ದು ನಿಂತವರು. ಅಲ್ಲದೇ ಹಲವಾರು ಏಳು ಬೀಳುಗಳನ್ನು ಕಂಡಿದ್ದವರು. ಜೀವನದಲ್ಲಿ ಈ ಅನಾರೋಗ್ಯ ಸಮಸ್ಯೆ ಅವರನ್ನು ಬಿಟ್ಟೂಬಿಡದಂತೆ ಕಾದಿದ್ದು, ಇದರ ನಡುವೆಯೂ ಹಲವಾರು ಸಾಧನೆಗಳನ್ನು ಮಾಡಿದ ನಟ. ಇವರು ತಮ್ಮ ಹಾಸ್ಯದಿಂದಲೇ ಮನೆಮಾತಾಗಿದ್ದು, ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಲು ಹಾತೊರೆಯುತ್ತಿದ್ದರು. ಅಭಿನಯ ಮಾತ್ರವಲ್ಲದೇ ಸಿನಿಮಾ ನಿರ್ಮಾಣದಲ್ಲಿಯೂ ಮುಂದೆ ಬರಬೇಕೆಂದು ಹಲವಾರು ಗುರಿಗಳನ್ನು ಇಟ್ಟುಕೊಂಡಿದ್ದರು.

ರಾಜಕೀಯ ಸಾಧನೆಯ ಹಂಬಲ

ಬುಲೆಟ್ ಪ್ರಕಾಶ್ ಕೇವಲ ಚಿತ್ರರಂಗ ಮಾತ್ರವಲ್ಲದೆ ರಾಜಕೀಯ ರಂಗಕ್ಕೂ ಇಳಿದಿದ್ದರು. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರಿದ್ದರು. ಚುನಾವಣೆಯ ಸಮಯದಲ್ಲಿ ಬಿಜೆಪಿ ಪಕ್ಷ ಪರವಾಗಿ ಹಲವಾರು ಕ್ಯಾಂಪೇನ್ ಗಳನ್ನೂ ಮಾಡಿದ್ದರು. ಕಳೆದ ಬಾರಿಯ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಚಾಮರಾಜಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಆಗಿದ್ದರು. ತಮ್ಮ ಗೆಳೆಯರ ಬಳಿಯಲ್ಲಿ ಶಾಸಕರಾಗಿ ಜನಸೇವೆಯನ್ನು ಮಾಡಬೇಕೆಂಬ ತಮ್ಮ ಆಸೆಯನ್ನೂ ಹೇಳಿಕೊಂಡಿದ್ದರು.

bullet-prakash-died-before-he-full-fill-his-dream

ಕೊನೆಕ್ಷಣದವರೆಗೂ ಬಣ್ಣ ಹಚ್ಚಬೇಕೆಂಬ ಆಸೆ

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬಣ್ಣ ಹಚ್ಚುವುದನ್ನು ಬಿಟ್ಟಿರಲಿಲ್ಲ. ಕಳೆದಬಾರಿ ಅವರು ಸಾವಿನ ಮನೆಯನ್ನು ತಟ್ಟಿ ಮರಳಿ ಬಂದಿದ್ದರು. ಈ ಸಮಯದಲ್ಲಿ ಅವರು ನನ್ನ ಕೊನೆಯ ಕ್ಷಣದವರೆಗೂ ಬಣ್ಣವನ್ನು ಹಚ್ಚುತ್ತಿರಬೇಕು ಎಂದು ಹೇಳಿದ್ದರು. ಅಭಿನಯವನ್ನು ಅಷ್ಟು ಇಷ್ಟ ಪಡುವ ಅವರು ಈ ವರ್ಷ ಹೆಚ್ಚಿನ ಸಮಯವನ್ನು ಆಸ್ಪತ್ರೆಯಲ್ಲಿಯೇ ಕಳೆಯಬೇಕಾಗಿ ಬಂದಿತ್ತು.

ಮಗಳ ಮದುವೆಯನ್ನು ಮಾಡಬೆಂದುಕೊಂಡಿದ್ದರು

ಬುಲೆಟ್ ಪ್ರಕಾಶ್ ಅವರು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ, ಅವರಲ್ಲಿ ಮಗಳ ಮದುವೆಯನ್ನು ಬಹಳ ವಿಜ್ರಂಬಣೆಯಿಂದ ಮಾಡಬೇಕು ಎಂಬ ಕನಸನ್ನು ಹೊಂದಿದ್ದರು. ಸಾಮಾನ್ಯವಾಗಿ ಪ್ರತಿಯೊಬ್ಬ ತಂದೆಯೂ ಉತ್ತಮ ವರನನ್ನು ಹುಡುಕಿ ಮಗಳ ಮದುವೆಯನ್ನು ಸುಂದರವಾಗಿ ಮಾಡಬೇಕು ಎನ್ನುವ ಕನಸನ್ನು ಹೊಂದಿರುತ್ತಾರೆ. ಆದರೆ ಬುಲೆಟ್ ಪ್ರಕಾಶ್ ಅವರ ಕನಸು ನೆರವೇರುವ ಮೊದಲೇ ಕೊನೆಯುಸಿರು ಎಳೆದಿದ್ದಾರೆ.

bullet-prakash-died-before-he-full-fill-his-dream

ಮಗನನ್ನು ತೆರೆಮೇಲೆ ನೋಡಬೇಕೆಂಬ ಆಸೆ

ಬುಲೆಟ್ ಪ್ರಕಾಶ್ ತನ್ನ ಮಗನನ್ನು ನಾಯಕ ನಟನನ್ನಾಗಿ ತೆರೆಯಮೇಲೆ ತರಬೇಕು ಎನ್ನುವ ಮಹತ್ತರವಾದ ಕನಸು ಹೊಂದಿದ್ದರು. ಅದಕ್ಕೆ ಬೇಕಾದ ಎಲ್ಲ ತಯಾರಿ ಮತ್ತು ತರಬೇತಿಗಳನ್ನು ಕೊಡಿಸಿದ್ದರು. ಆದರೆ ಈ ಕನಸು ಈಡೇರುವ ಮೊದಲೇ ಅವರ ಸಾವು ನಿರಾಶೆಯನ್ನು ಮೂಡಿಸಿದೆ.

        ತಮ್ಮ ಜೀವನದಲ್ಲಿ ಹಲವಾರು ಏಳು ಬೀಳುಗಳನ್ನು ನೋಡಿದ್ದ, ಅಲ್ಲದೇ ತನ್ನ ನೋವನ್ನೆಲ್ಲ ಮರೆತು ಇತರರನ್ನು ನಗಿಸುತ್ತಾ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಹಲವು ದಿನಗಳಿಂದ ಅವರನ್ನು ಕಾಡಿದ ಈ ಅನಾರೋಗ್ಯ ಎಲ್ಲಾ ರೀತಿಯಿಂದಲೂ ಅಂದರೆ ಮಾನಸಿಕವಾಗಿ, ಆರ್ಥಿಕವಾಗಿ ಮತ್ತು ದೈಹಿಕವಾಗಿಯೂ ಕುಗ್ಗುವಂತೆ ಮಾಡಿತ್ತು. ಇಂತಹ ಮಹಾನ್ ಕಲಾವಿದನ ಜೀವನದ ಅರ್ಧ ಪ್ರಯಾಣ ತುಂಬಲಾರದ ನಷ್ಟವನ್ನು ತಂದಿದ್ದಂತು ಸುಳ್ಳಲ್ಲ.

LEAVE A REPLY

Please enter your comment!
Please enter your name here