ಬೆಂಗಳೂರು: ಸಮ್ಮಿಶ್ರ ಸರಕಾರದ ಬಜೆಟ್ ಅಧಿವೇಶನ ಬುಧವಾರವಾದ ಇಂದಿನಿಂದ ಆರಂಭವಾಗಿದ್ದು, ಕಾಂಗ್ರೆಸ್ಸ್ ನ ಅತ್ರಪ್ತ ಶಾಸಕರು ಸೇರಿದಂತೆ 7 ಶಾಸಕರು ಗೈರಾಗಿದ್ದರು.
ಕಾಂಗ್ರೆಸ್ಸ್ ನ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಡಾ.ಉಮೇಶ್ ಜಾಧವ್, ಬಿ.ನಾಗೇಂದ್ರ, ಮಹೇಶ್ ಕಮಟಹಳ್ಳಿ ಹಾಗೂ ಶಾಸಕರಾದ ಜಿ.ಎನ್.ಗಣೇಶ್, ಡಾ.ಸುಧಕಾರ್ ಮತ್ತು ಸೌಮ್ಯರೆಡ್ಡಿ ಕಲಾಪದಿಂದ ದೂರ ಉಳಿದಿದ್ದರು.
ಗಣೇಶ್ ಅವರಿಂದ ಹಲ್ಲೆಗೊಳಗಾಗಿದ್ದ ಶಾಸಕ ಆನಂದ್ ಸಿಂಗ್ ಕಲಾಪದಲ್ಲಿ ಪಾಲ್ಗೊಂಡಿದ್ದು, ಬಳಿಕ ಎದೆನೋವು ಮತ್ತು ವಾಂತಿಯಾಗುತ್ತಿದೆ ಎಂದುಹೇಳಿ ಆಸ್ಪತ್ರೆಗೆ ದಾಖಲಾದರು.
Image Copyright : goolge.com