ಮಡಿಕೇರಿ : ಕಳೆದ ಐದು ದಿನಗಳಿಂದ ಬ್ರಹ್ಮಗಿರಿಬೆಟ್ಟ ಕುಸಿತದ ಕಾರ್ಯಾಚರಣೆಯಲ್ಲಿ, ಇಂದು ದುರಂತ ಅಂತ್ಯ ಕಂಡ ನಾರಾಯಣ ಆಚಾರ್ಯ ಅವರ ಮೃತ ದೇಹ ಪತ್ತೆಯಾಗಿದೆ.
ಗುರುವಾರ ಬ್ರಹ್ಮಗಿರಿಬೆಟ್ಟ ಕುಸಿತ ಉಂಟಾದ ಹಿನ್ನೆಲೆಯಲ್ಲಿ, ತಲಕಾವೇರಿ ದೇವಾಲಯದ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಸೇರಿದಂತೆ ನಾಲ್ವರು ನಾಪತ್ತೆಯಾಗಿದ್ದರು. ಅವರ ಮನೆಯಿರುವ ಪ್ರದೇಶವು ಕೊಚ್ಚಿಕೊಂಡು ಹೋಗಿದ್ದು, ಕೆಲವಾರು ಅವಶೇಷಗಳು ದೊರೆತಿದ್ದವು. ಸತತ ಕಾರ್ಯಾಚರಣೆ ನಡೆಸಿದ ತಂಡ ಶನಿವಾರ ನಾರಾಯಣ ಆಚಾರ್ ಸಹೋದರ ಆನಂಧ ತೀರ್ತರ ದೇಹವು ಪತ್ತೆಯಾಗಿತ್ತು.
ಇದನ್ನೂ ಓದಿರಿ: ಪಿಯುಸಿ ಪೂರಕ ಪರೀಕ್ಷೆ ದಿನಾಂಕ ನಿಗದಿ: ಇಲ್ಲಿದೆ ಸಂಪೂರ್ಣ ಮಾಹಿತಿ
ಇಂದು ಬೆಳಗ್ಗಿನಿಂದ ಕಾರ್ಯಾಚರಣೆಗೆ ತೊಡಗಿದ್ದ ತಂಡಕ್ಕೆ ನಾರಾಯಣ ಆಚರ ಅವರಿಗೆ ಸೇರಿದ್ದ ಬೈಕ್ ಮತ್ತು ಕಾರುಗಳು ಸಿಕ್ಕಿದ್ದವು. ಇದಲ್ಲದೆ ಅವರ ಮನೆಯ ನಾಯಿಯ ಮೃತ ದೇಹವು ಸಿಕ್ಕಿತ್ತು. ನಂತರದಲ್ಲಿ ನಾರಾಯಣ ಆಚರ ಅವರ ದೇಹವೂ ದೊರೆತಿದೆ ಎಂದು ತಿಳಿದು ಬಂದಿದೆ.
ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶದಲ್ಲಿ ಸಚಿವ ವಿ. ಸೋಮಣ್ಣ, ಕೆ ಜಿ ಬೋಪಯ್ಯ, ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ, ಪುತ್ರಿಯರಾದ ಶಾರದಾ ಮತ್ತು ನಮೀತಾ ಆಚರ ಅವರೂ ಹಾಜರಿದ್ದರು. ಕಾರ್ಯಾಚರಣೆ ನಿರತ ತಂಡ ನಾರಾಯಣ ಆಚಾರ್ ಅವರ ಪತ್ನಿ ಮತ್ತು ಸಹಾಯಕ ಅರ್ಚಕರಾದ ಅವಿಕಿರಣ ಮತ್ತು ಶ್ರೀನಿವಾಸ ಅವರಿಗಾಗಿ ಶೋಧಕಾರ್ಯ ಮುಂದುವರೆದಿದೆ.
ಇದನ್ನೂ ಓದಿರಿ: ಇವರೇ ಎಸ್ಎಸ್ಎಲ್ಸಿ ಟಾಪರ್ಸ್, 625ಕ್ಕೆ 625 ಅಂಕ ಪಡೆದ ಸಾಧಕರು