ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸ್ತನ್ಯಪಾನದ ಮೂಲಕ ಕರೋನಾ ಸೋಂಕಿನ ಅಪಾಯವಿಲ್ಲ, ಆದ್ದರಿಂದ ಕೋವಿಡ್ -19 ಹೊಂದಿರುವ ಮಹಿಳೆಯರು ತಮ್ಮ ಮಗುವಿಗೆ ಹಾಲುಣಿಸಬಹುದು ಎಂದು ಹೇಳಿದೆ. ಕೋವಿಡ್ -19 ರ ನಿಯಮಿತ ಪತ್ರಿಕಾಗೋಷ್ಠಿಯಲ್ಲಿ, ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಡಾ. ಟೆಡ್ರೊಸ್ ಗೇಬ್ರಿಯಸ್ ಮಾತನಾಡುತ್ತ, “ಕೋವಿಡ್ -19 ಸೋಂಕಿಗೆ ಒಳಗಾಗಿದ್ದರೂ ಅಥವಾ ಸೋಂಕಿನ ಶಂಕೆಯಿದ್ದರೂ ಮಗುವಿಗೆ ಹಾಲುಣಿಸಲು ತಾಯಿಯನ್ನು ಪ್ರೋತ್ಸಾಹಿಸಬೇಕು” ಎಂದು ಹೇಳಿದರು. ಎಲ್ಲಿಯವರೆಗೆ ತಾಯಿ ತುಂಬಾ ಅನಾರೋಗ್ಯಕ್ಕೆ ಒಳಗಾಗುವುದಿಲ್ಲವೋ ಅಲ್ಲಿಯವರೆಗೆ ಮಗುವನ್ನು ಅವಳಿಂದ ಬೇರ್ಪಡಿಸಬಾರದು ಎಂದು ಹೇಳಿದರು.
ಸ್ತನ್ಯಪಾನದ ಮೂಲಕ ಕರೋನಾ ಸೋಂಕು ಹರಡುವ ಬಗ್ಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಸಂಸ್ಥೆಯ ಆರೋಗ್ಯ ನಿರ್ದೇಶಕ ಡಾ. ಅನ್ಶು ಬಂಜೀರ್ ಹೇಳಿದ್ದಾರೆ. ಸೋಂಕಿತ ತಾಯಿ ಸ್ತನ್ಯಪಾನ ಮಾಡಿಸುವುದರಿಂದ ಮಗುವಿಗೆ ಸೋಂಕಿನ ಅಪಾಯವಿದೆಯೇ ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ತಾಯಿಯ ಹಾಲಿನಲ್ಲಿ ವೈರಸ್ ಜೀವಂತವಾಗಿ ಕಂಡುಬಂದಿಲ್ಲ”. ಕೋವಿಡ್ -19 ವೈರಸ್‌ನ ಆರ್‌ಎನ್‌ಎ ತುಣುಕುಗಳು ತಾಯಿಯ ಹಾಲಿನಲ್ಲಿ ಕಂಡುಬಂದಿದ್ದರೂ, ಜೀವಂತ ವೈರಸ್ ಕಂಡುಬಂದಿಲ್ಲ. ಆದ್ದರಿಂದ ತಾಯಿಯ ಹಾಲಿನಿಂದ ಮಗುವಿಗೆ ಕರೋನಾ ಸೋಂಕು ಹರಡುವ ಬಗ್ಗೆ ಇದುವರೆಗೆ ಯಾವುದೇ ಪುರಾವೆಗಳಿಲ್ಲ” ಎಂದು ಹೇಳಿದ್ದಾರೆ.
ಸ್ತನ್ಯಪಾನ ಸಮಯದಲ್ಲಿ ತಾಯಿಯಿಂದ ಮಗುವಿಗೆ ಕೋವಿಡ್ -19 ಹರಡುವ ಅಪಾಯವನ್ನು ಡಬ್ಲ್ಯುಎಚ್‌ಒ ಎಚ್ಚರಿಕೆಯಿಂದ ಅಧ್ಯಯನ ಮಾಡಿದೆ ಎಂದು ಡಾ. ಟೆಡ್ರೊಸ್ ಹೇಳಿದರು. ಮಕ್ಕಳಲ್ಲಿ ಕೋವಿಡ್ -19 ರ ಅಪಾಯಕ್ಕಿಂತ ಸ್ತನ್ಯಪಾನ ತಡೆಯುವುದರಿಂದ ಉಂಟಾಗುವ ಅಪಾಯ ಹೆಚ್ಚು. ಪ್ರಸ್ತುತ ಪುರಾವೆಗಳ ಆಧಾರದ ಮೇಲೆ, ಕೋವಿಡ್ -19ರ ಅಪಾಯಕ್ಕಿಂತ ಸ್ತನ್ಯಪಾನವು ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ ಎಂದು ಡಬ್ಲ್ಯುಎಚ್‌ಒ ಶಿಫಾರಸು ಮಾಡುತ್ತದೆ. ಆದರೆ ಕೋವಿಡ್ -19 ಸೋಂಕಿತ ತಾಯಂದಿರು ಸ್ತನ್ಯಪಾನ ಮಾಡುವ ಕುರಿತು ಡಬ್ಲ್ಯುಎಚ್‌ಒ ಮಾರ್ಗಸೂಚಿಗಳನ್ನು ಸಹ ನೀಡಿದೆ. ಸ್ತನ್ಯಪಾನ ಮಾಡುವ ಮೊದಲು, ತಾಯಂದಿರು ಮುಖಗವಸು (ಮಾಸ್ಕ್) ಹಾಕಿಕೊಳ್ಳಬೇಕು, ಅಲ್ಲದೇ ಮಗುವನ್ನು ಸ್ಪರ್ಶಿಸುವ ಮೊದಲು ಉತ್ತಮವಾಗಿ ಕೈ ತೊಳೆಯಬೇಕು. ಸುತ್ತಮುತ್ತ ಸೋಂಕು ಹರಡದ ರೀತಿಯಲ್ಲಿ ಮುಂಜಾಗ್ರತೆಯನ್ನು ತೆಗೆದುಕೊಂಡು ಹಾಲುಣಿಸುವುದು ಕಡ್ಡಾಯ ಎಂದು ಹೇಳಿದೆ.