breaking-news-actor-chiranjeevi-sarja-passed-away

ಬೆಂಗಳೂರು: ಕನ್ನಡ ಚಿತ್ರರಂಗದ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಯುವ ನಟನನ್ನು ಕಳೆದುಕೊಂಡ ಅವರ ಕುಟುಂಬಕ್ಕೆ, ಕನ್ನಡ ಚಿತ್ರರಂಗಕ್ಕೆ ಮತ್ತು ಅಭಿಮಾನಿಗಳಿಗೆ ಆಘಾತವನ್ನು ತಂದಿದೆ. 

ಚಿರಂಜೀವಿ ಸರ್ಜಾ ಅವರಿಗೆ ಹೃದಯಾಘಾತವಾಗಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಸಮೀಪದ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಿರಂಜೀವಿ ಸರ್ಜಾ (39) ಅವರು ಕೊನೆಯುಸಿರು ಎಳೆದಿದ್ದಾರೆ. 

ಇವರು 1980 ಅಕ್ಟೋಬರ್ 17 ರಂದು ಬೆಂಗಳೂರಿನಲ್ಲಿ ಜನಿಸಿದ್ದರು. ಅರ್ಜುನ್ ಸರ್ಜಾ ಅವರ ಜೊತೆಯಲ್ಲಿ ನಾಲ್ಕು ವರ್ಷ ಸಹ ನಿರ್ದೇಶಕನಾಗಿ ಕೆಲಸವನ್ನೂ ಮಾಡಿದ್ದರು. 2009 ರಲ್ಲಿ ವಾಯುಪುತ್ರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಇವರು 22ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 

ಚಿರು, ಕೆಂಪೇಗೌಡ, ವರದನಾಯಕ, ಚಂದ್ರಲೇಖ, ಆಟಗಾರ, ಪ್ರೆಮಬರಹ, ದಂಡಂ ದಶಗುಣಂ, ರುದ್ರತಾಂಡವ ಸೇರಿದಂತೆ 22ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸಹ ನಟ ನಟಿಯರ ಜೊತೆಯಲ್ಲಿ ಸದಾ ಉತ್ತಮ ಸಂಬಂದವನ್ನು ಇಟ್ಟುಕೊಳ್ಳುತ್ತಿದ್ದ ಇವರು ಯಾವಾಗಲು ಖುಷಿ ಖುಷಿಯಾಗಿ ಚಿತ್ರೀಕರಣದಲ್ಲಿ ಬಾಗಿಯಾಗುತ್ತಿದ್ದರು ಎಂದು ಹಲವು ಸಹ ಕಲಾವಿದರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇವರು 2018 ಮೇ ನಲ್ಲಿ ನಟಿ ಮೇಘನಾ ರಾಜ್ ಅವರ ಜೊತೆಯಲ್ಲಿ ಮದುವೆಯಾಗಿದ್ದರು. ತಮ್ಮ ವಿಶಿಷ್ಟ ನಟನೆಯ ಶೈಲಿಯಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ನಟನನ್ನು ಕಳೆದುಕೊಂಡು ಅವರ ಕುಟುಂಬ, ಚಿತ್ರರಂಗ ಮತ್ತು ಸಾವಿರಾರು ಅಭಿಮಾನಿಗಳಿಗೆ ತುಂಬಲಾರದ ನಷ್ಟವಾಗಿರುವುದಂತು ಸುಳ್ಳಲ್ಲ.  

LEAVE A REPLY

Please enter your comment!
Please enter your name here