Geeta Nagabhoshan

ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ ಗೀತಾ ನಾಗಭೂಷಣ(78) ಅವರು ಭಾನುವಾರ ರಾತ್ರಿ ಕೊನೆಯುಸಿರು ಎಳೆದಿದ್ದಾರೆ. ಕಲಬುರ್ಗಿಯ ಸ್ವಸ್ತಿಕ್ ನಗರದ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

1942 ರ ಮಾರ್ಚ್ 25 ರಂದು ಸಾವಳಗಿ ಎಂಬ ಗ್ರಾಮದಲ್ಲಿ ಜನಿಸಿದರು. ಬಡತನ, ಅಸಹಕಾರ, ಹೆಣ್ಣಿನ ಕುರಿತು ಇರುವ ಅಸಡ್ಡೆ ಇವುಗಳನ್ನೆಲ್ಲ ತಮ್ಮ ತಮ್ಮ ಲೇಖನಗಳಲ್ಲಿ ಎತ್ತಿ ತೋರಿದ ದಿಟ್ಟ ಮಹಿಳೆಯಾಗಿದ್ದರು. ಅವರ ‘ಬದುಕು’ ಕಾದಂಬರಿಗೆ 2004 ರ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ.

ಇವರ ‘ಬದುಕು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇದಲ್ಲದೆ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಗಳನ್ನು ಪಡೆದ ಹೆಗ್ಗಳಿಕೆ ಇವರದು. ಅವ್ವ ಮತ್ತು ಇತರ ಕಥೆಗಳು, ಸಪ್ತವರ್ಣದ ಹಾಡು, ದುರಗಮುರಗಿಯರ ಸಂಸ್ಕೃತಿ, ಜ್ವಲಂತ, ಜೋಗಿಣಿ, ನನ್ನ ಚೆಲುವು ನಿನ್ನ ಒಲವು ಸೇರಿದಂತೆ ಇನ್ನೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

LEAVE A REPLY

Please enter your comment!
Please enter your name here