boy-clicks-selfie-with-pm-modi-trump
Image Credit: NDTV

ಹ್ಯೂಸ್ಟನ್: ನಿನ್ನೆ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಬಾಲಕನೋರ್ವ ಮೋದಿ ಮತ್ತು ಟ್ರಂಪ್ ಜೊತೆಯಲ್ಲಿ ಸೆಲ್ಪಿ ಕ್ಲಿಕ್ಕಿಸಿಕೊಂಡು ಜನಪ್ರೀಯನಾಗಿದ್ದಾನೆ. ಎಲ್ಲೆಲ್ಲು ಈ ಬಾಲಕ ಯಾರು ಎನ್ನುವ ಪ್ರಶ್ನೆ ಎದ್ದಿದ್ದು, ನಿಮ್ಮ ವಾರ್ತಾವಾಣಿಯಲ್ಲಿ ಇದಕ್ಕೆ ಉತ್ತರ ದೊರೆಯಲಿದೆ ನೋಡಿ…

ಇಂದಿನ ದಿನಗಳಲ್ಲಿ ಸೆಲ್ಪಿ ತೆಗೆದುಕೊಳ್ಳುವುದು ತುಂಬಾ ಸಾಮಾನ್ಯ. ಆದರೆ ಸ್ನೇಹಿತರೆ, ನಿನ್ನೆ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಬಾಲಕನೊಬ್ಬ ಅತ್ಯಂತ ಫವರ್ ಪುಲ್ ಸೆಲ್ಪಿಯನ್ನು ಪಡೆದಿದ್ದಾನೆ. ನಿನ್ನೆ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಪ್ರದರ್ಶನ ಮಾಡಿದ ಹುಡುಗ ಹುಡುಗಿಯರನ್ನು ಮೋದಿ ಹಾಗೂ ಟ್ರಂಪ್ ಮಾತನಾಡಿಸುತ್ತ ಸಾಗಿದ್ದರು. ಕೊನೆಯಲ್ಲಿ ಈ ಬಾಲಕ ನಿಂತಿದ್ದ, ಹೋಗುತ್ತಿದ್ದ ನಾಯಕರಲ್ಲಿ ಸೆಲ್ಪಿ ಕೇಳಿದ್ದಾನೆ. ಆಗ ಟ್ರಂಪ್ ಸ್ವಲ್ಪ ಮುಂದೆ ಸಾಗಿದ್ದ ಮೋದಿಯವರನ್ನು ಕರೆದು ಸೆಲ್ಪಿಗೆ ಪೋಸ್ ನೀಡಿದ್ದಾರೆ. ಅದೃಷ್ಟಶಾಲಿ ಬಾಲಕನಿಗೆ ವಿಶ್ವದ ಇಬ್ಬರು ಪ್ರಭಾವಿ ನಾಯಕರ ಜೊತೆಯಲ್ಲಿ ಸೆಲ್ಪಿ ಲಭಿಸಿದ್ದು, ಎಲ್ಲರೂ ಕೊಂಡಾಡುತ್ತಿದ್ದಾರೆ.

boy-clicks-selfie-with-pm-modi-trump
Image Credit: NDTV

50,000 ಜನರು ಸೇರಿದ್ದ ಕಾರ್ಯಕ್ರಮದಲ್ಲಿ ಅತ್ಯಂತ ಫರ್ಪೆಕ್ಟ್ ಸೆಲ್ಪಿ ಪಾಡೆದ ಬಾಲಕ ಮತ್ತಾರು ಅಲ್ಲ ಭಾರತದ ಕುವರ ನಮ್ಮ ಶಿರಸಿ ಮೂಲದ ಸಾತ್ವಕ ಹೆಗಡೆ. ಈತ ಪ್ರಭಾಕರ ಹೆಗಡೆ ಮತ್ತು ಮೇಧಾ ಹೆಗಡೆಯವರ 9ವರ್ಷದ ಪುತ್ರನಾಗಿದ್ದಾನೆ. ಸದ್ಯ ಈತ ಈ ಸೆಲ್ಪಿಯ ಮೂಲಕ ದೇಶದೆಲ್ಲೆಡೆ ಪ್ರಸಿದ್ದಿ ಹೊಂದಿದ್ದಾನೆ.

LEAVE A REPLY

Please enter your comment!
Please enter your name here