ಪಿಎಂ ರೇಸ್‌ನಿಂದ ಹಿಂದೆ ಸರಿದ ಬೋರಿಸ್ ಜಾನ್ಸನ್​​: ರಿಷಿ ಸುನಕ್​ಗೆ​​ ಒಲಿಯಲಿದೆಯಾ ಪ್ರಧಾನಿ ಪಟ್ಟ ?

boris-johnson-pulls-out-of-uk-pm-race-rishi-sunak-closer-to-victory

ಬ್ರಿಟನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಈ ಮೂಲಕ ರಿಷಿ ಸುನಕ್​ ಪ್ರಧಾನಿ ಹುದ್ದೆಗೆ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ.

ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ 100 ಸಂಸದರ ಬೆಂಬಲ ಹೊಂದಿದ್ದು, ಆದರೆ ಪಕ್ಷದ ಏಕತೆಯ ದೃಷ್ಟಿಯಿಂದ ಮುಂದೆ ಹೋಗದಿರಲು ನಿರ್ದರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ರಿಷಿ ಸುನಕ್​ ಅವರ ದಾರಿ ಸುಘಮವಾದಂತಾಗಿದೆ.

ಈ ಕುರಿತು ಮಾತನಾಡಿರುವ ಬೋರಿಸ್ ಜಾನ್ಸನ್, ಸ್ಪರ್ಧೆಯಿಂದ ಹಿಂದೆಸರಿಯುತ್ತಿರುವುದಾಗಿ ಹೇಳಿದ್ದಾರೆ. ನಾನು ಮಾಡಬೇಕಾಗಿರುವುದು ಇನ್ನೂ ಸಾಕಷ್ಟಿದೆ, ಮುಂದೆ ಯಾರೇ ಪ್ರಧಾನಿಯಾಗಿ ಆಯ್ಕೆಯಾದರೂ ಅವರಿಗೆ ಬೆಂಬಲ ನೀಡುತ್ತೇನೆ. ನಾನು ಈಗಾಗಲೇ ರಿಷಿ ಹಾಗೂ ಪೆನ್ನಿ ಇಬ್ಬರ ಜೊತೆಯಲ್ಲಿಯೂ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.

ಪೆನ್ನಿ ಮೊರ್ಡಾಂಟ್ ಸ್ರ್ಪಧಿಸುವ ಸಾಧ್ಯತೆ ಇದ್ದು ಇಂದು ರಾತ್ರಿ ವೇಳೆಗೆ ಸ್ಪಷ್ಟ ಮಾಹಿತಿ ಹೊರಬೀಳಲಿದೆ. ಇಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರೆ, ಸಂಸದರು ಆನ್‍ಲೈನ್ ಮೂಲಕ ಮತದಾನದ ಮಾಡಲಿದ್ದಾರೆ.

ಇದನ್ನೂ ಓದಿರಿ: ಮತ್ತೆ ಕ್ಸಿ ಜಿನ್‌ ಪಿಂಗ್‌ಗೆ ಚೀನಾದ ಚುಕ್ಕಾಣಿ, ಸತತ ಮೂರು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಕಮ್ಯುನಿಸ್ಟ್‌ ನಾಯಕ

LEAVE A REPLY

Please enter your comment!
Please enter your name here