ಕರ್ನಾಟಕ ಬಸ್‌ಗೆ ಮತ್ತೆ ಮಸಿ; ಮುಂದುವರಿದ ಎಂಇಎಸ್ ಪುಂಡಾಟಿಕೆ

border-dispute-karnataka-bus-gets-ink-again-continuing-violence-by-the-thackeray-faction

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ (Border Dispute) ಮಿತಿಮೀರಿದೆ. ಮಹಾರಾಷ್ಟ್ರದಲ್ಲಿ ಎಂಇಎಸ್ ಮತ್ತು ಕೆಲ ರಾಜಕೀಯ ಬಣದ ಪುಂಡರು ಗಲಾಟೆ ಮುಂದುವರಿಸಿದ್ದು, ಕರ್ನಾಟಕ ಬಸ್‌ ಗಳಿಗೆ ಮಸಿ ಬಳಿಯಲಾಗುತ್ತಿದೆ.

ನಿನ್ನೆ ರಾತ್ರಿ ಮಹಾರಾಷ್ಟ್ರದಲ್ಲಿ ರಾತ್ರಿ ಡಿಪೊಗೆ ನುಗ್ಗಿ ಕರ್ನಾಟಕ ಸಾರಿಗೆ ಬಸ್ಸುಗಳಿಗೆ ಶಿವಸೇನೆ, ಮಹಾರಾಷ್ಟ್ರ ನವ ನಿರ್ಮಾಣ ವೇದಿಕೆ ಸದಸ್ಯರು ಕಪ್ಪು ಮಸಿ ಬಳಿದು ವಿಕೃತಿ ಮೆರೆದಿದ್ದಾರೆ. ಸಿಂಧದುರ್ಗದಲ್ಲಿ ಎಂಇಎಸ್ ಕಾರ್ಯಕರ್ತರು ಕರ್ನಾಟಕ ಸಾರಿಗೆ ಬಸ್ಸುಗಳಲ್ಲಿ ಮರಾಠಿಯಲ್ಲಿ ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟಿಕೆ ಮೆರೆದಿದ್ದಾರೆ.

ಇದನ್ನೂ ಓದಿರಿ: ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ; 16 ಹೊಸ ಮಸೂದೆ ಮಂಡನೆಗೆ ಸಿದ್ಧತೆ

ಇದಕ್ಕೆ ಪ್ರತಿಯಾಗಿ ಕರ್ನಾಟಕದಲ್ಲಿ ಕರವೇ ಕಾರ್ಯಕರ್ತರು ಗಡಿ, ಭಾಷೆ ವಿಚಾರದಲ್ಲಿ ಕನ್ನಡಿಗರನ್ನು ಕೆಣಕುತ್ತಿರುವ ಎಂಇಎಸ್​​, ಮಹಾರಾಷ್ಟ್ರ ರಾಜಕಾರಣಿಗಳ ನಡೆ ಖಂಡಿಸಿ ಇಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಬಣದಿಂದ ಪ್ರತಿಭಟನೆ ನಡೆಯಲಿದೆ.

ಇದನ್ನೂ ಓದಿರಿ: 400 ಅಡಿ ಬೋರ್‌ವೆಲ್‌ನಲ್ಲಿ ಬಿದ್ದ 8 ವರ್ಷದ ಮಗು; ಮುಂದುವರೆದ ಕಾರ್ಯಾಚರಣೆ

LEAVE A REPLY

Please enter your comment!
Please enter your name here