ದೆಹಲಿ: ದೆಹಲಿಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಕ್ಷರಶಃ ಮ್ಯಾಜಿಕ್ ಮಾಡಿದ್ದು, ದೆಹಲಿ ಎಂಸಿಡಿಯ 250 ವಾರ್ಡ್‌ಗಳ ಪೈಕಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಬಿಜೆಪಿಯ 15 ವರ್ಷಗಳ ಹಿಡಿತವನ್ನ ಅಂತ್ಯಗೊಳಿಸಿದ್ದಾರೆ.
ದೆಹಲಿ ನಗರ ಪಾಲಿಕೆ ಒಟ್ಟು 250 ವಾರ್ಡುಗಳನ್ನು ಹೊಂದಿದ್ದು, ಅಧಿಕಾರ ಹಿಡಿಯಲು ಮ್ಯಾಜಿಕ್ ನಂಬರ್ 126 ಆಗಿದೆ. ಇದೀಗ ಫಲಿತಾಂಶ ಬಂದಿದ್ದು, ಆಫ್ 135 ಸ್ಥಾನ, ಬಿಜೆಪಿ 103 ಸ್ಥಾನ ಮತ್ತು ಕಾಂಗ್ರೆಸ್ ಕೇವಲ 8 ಸ್ಥಾನಗಳಲ್ಲಿ ಬಹುಮತವನ್ನು ಸಾಧಿಸಿವೆ. ಈ ಮೂಲಕ ಎಂಸಿಡಿಯಲ್ಲಿ ಬರೋಬ್ಬರಿ 15 ವರ್ಷದ ಬಿಜೆಪಿ ಆಡಳಿತ ಕೊನೆಯಾದಂತಾಗಿದೆ.
ಇದನ್ನೂ ಓದಿರಿ: ಲೋಕಸಭೆಯಲ್ಲಿ ಮರಾಠಿಗರ ಮೇಲೆ ಕನ್ನಡಿಗರಿಂದ ಹಲ್ಲೆ ಎಂದ ಎನ್ ಸಿಪಿ ಸಂಸದೆ ಸುಪ್ರಿಯಾ ಸುಲೆ
ಇನ್ನು ಗೆಲುವಿಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ‘ಎಂಸಿಡಿಯಲ್ಲಿ ಆಮ್ ಆದ್ಮಿ ಪಕ್ಷವನ್ನು ನಂಬಿದ್ದಕ್ಕಾಗಿ ದೆಹಲಿಯ ಜನರಿಗೆ ಹೃತ್ಪೂರ್ವಕ ಕೃತಜ್ಞತೆಗಳು’ ಎಂದು ಟ್ವೀಟ್ ಮಾಡಿದ್ದಾರೆ.
CM @ArvindKejriwal‘s Victory Speech from AAP HQ after winning Delhi MCD Elections | LIVE #MCDMeinBhiKejriwal https://t.co/9UQ2wWJLSI
— AAP (@AamAadmiParty) December 7, 2022