bjp-national-secretary-ct-ravi-launches-counter-attack-on-hd-kumaraswami-over-remarks-against-rss

ಬೆಂಗಳೂರು: ಆರ್ ಎಸ್ ಎಸ್ ಸಂಘಟನೆಯ ಕುರಿತು ಕುಮಾರಸ್ವಾಮಿಯವರು ನೀಡಿರುವ ಹೇಳಿಕೆಯು ರಾಜ್ಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಅವರ ಈ ಹೇಳಿಕೆಗೆ ಬಿಜೆಪಿ ಸೇರಿದಂತೆ ಹಲವರಿಂದ ವಿರೋಧ ವ್ಯಕ್ತವಾಗಿದ್ದು, ರಾಜಕೀಯ ಲಾಭಕ್ಕಾಗಿ ಕುಮಾರಸ್ವಾಮಿಯವರು ಇಂತಹ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

ಕುಮಾರಸ್ವಾಮಿಯವರು ನಿರಂತರವಾಗಿ ಆರ್ ಎಸ್ ಎಸ್ ಸಂಘಟನೆಯ ಕುರಿತು  ವಿವಿಧ ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಅವರು ತಮ್ಮ ಪಕ್ಷಕ್ಕೆ ಹೊಡೆತ ಉಂಟಾಗುವ ಸಮಯದಲ್ಲೆಲ್ಲ ಇಂತಹ ಹೇಳಿಕೆಗಳನ್ನು ನೀಡಿ ತಮ್ಮ ಪಕ್ಷದ ಕಡೆಗೆ ಓಲೈಕೆಯನ್ನು ಮಾಡಲು ಯಾವಾಗಲೂ ಪ್ರಯತ್ನಿಸುತ್ತಿರುತ್ತಾರೆ ಎಂದು ಹೇಳಿಕೆಗಳು ಕೇಳಿಬಂದಿವೆ.

ಇದನ್ನೂ ಓದಿರಿ: ಹುಬ್ಬಳ್ಳಿ ರೈಲ್ವೆ ಇಲಾಖೆಯಲ್ಲಿ ಕಾಲಿಯಿರುವ 90 ಕ್ಕೂ ಅಧಿಕ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

ಕುಮಾರಸ್ವಾಮಿಯವರ ಮಾತಿಗೆ ವಿರೋಧ ವ್ಯಕ್ತಪಡಿಸಿರುವ ನವರಸ ನಾಯಕ ಜಗ್ಗೇಶ್, “ಆರ್ ಎಸ್ ಎಸ್ ಸಂಘಟನೆ ನಾನು ಕಂಡಂತೆ  ಜಾತಿ, ಧರ್ಮವನ್ನು ಮೀರಿದ ಮಾತೃ ಹೃದಯಿ ಸಂಘಟನೆ. ಇದು ದೇಶದ ಸಂಕಷ್ಟ ಸಮಯ, ನೆರೆ ಸಂಕಷ್ಟ, ಕೊರೋನಾ ಸಮಯ ಸೇರಿದಂತೆ ಹಲವು ಸಂದರ್ಭಗಳಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ವಿದ್ಯಾಧಾನ, ಅನ್ನದಾನ ಸೇರಿದಂತೆ ಹಲವು ಉತ್ತಮ ಕಾಯಕವನ್ನು ಮಾಡಿಕೊಂಡು ಹೋಗುತ್ತಿರುವ ಶಿಸ್ತಿನ ಸೇನೆಯಾಗಿದೆ ಎಂದು ಹೇಳಿದ್ದಾರೆ.

bjp-national-secretary-ct-ravi-launches-counter-attack-on-hd-kumaraswami-over-remarks-against-rss-01bjp-national-secretary-ct-ravi-launches-counter-attack-on-hd-kumaraswami-over-remarks-against-rss-01

ಇದಲ್ಲದೇ ಮಾಧ್ಯಮದಲ್ಲಿ ನಡೆದ ನೇರ ಸಂವಾದದಲ್ಲಿ ಚಕ್ರವರ್ತಿ ಸೂಲಿಬೆಲೆಯವರು ಸಹ ನೇರವಾಗಿ ಕುಮಾರಸ್ವಾಮಿಯವರಿಗೆ, “ಆರ್ ಎಸ್ ಎಸ್ ಸಂಘಟನೆ ನಡೆಸುತ್ತಿರುವ ಶಿಕ್ಷಣ ಕೇಂದ್ರಗಳಿಗೆ ಭೇಟಿ ನೀಡಿ, ಒಮ್ಮೆ ವೀಕ್ಷಣೆ ಮಾಡಬೇಕೆಂದು ಆಹ್ವಾವನ್ನು ಸಹ ನೀಡಿದ್ದಾರೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಸಡ್ಡೆಯನ್ನು ತೋರಿದ್ದು, ಕೇವಲ ರಾಜಕೀಯ ಲಾಭಕ್ಕಾಗಿ ಓಲೈಕೆ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ಸಾಮಾನ್ಯ ಜನ ಮಾತನಾಡಿಕೊಳ್ಳುವಂತೆ ಮಾಡಿದ್ದಾರೆ.

ಇದನ್ನೂ ಓದಿರಿ: ಆ ಒಂದು ತಪ್ಪಿನಿಂದಾಗಿ ಕೋಪಗೊಂಡ ಅಯ್ಯಪ್ಪ ರಾಜರಾಣಿ ಕಾರ್ಯಕ್ರಮದಿಂದ ಹೊರನಡೆದಿದ್ದಾರೆ ! ಕಾರಣವೇನೆಂದು ಓದಿ ನೋಡಿ

ಸದ್ಯ ಬಿಜೆಪಿಯ ಸಿಟಿ ರವಿಯವರು ಮಾತನಾಡಿ, “ಕುಮಾರಸ್ವಾಮಿಯವರೇ ನಿಮಗೆ ಆರ್‌ಎಸ್‌ಎಸ್‌ ಬಗ್ಗೆ ಇನ್ನೂ ಅನುಮಾನಗಳಿದ್ದರೆ ನಿಮ್ಮ ತಂದೆ ದೇವೇಗೌಡರಲ್ಲಿ ಆ ಬಗ್ಗೆ ಕೇಳಿ. ದೇವೇಗೌಡರೇ ಆರ್‌ಎಸ್‌ಎಸ್‌ ಸಿದ್ಧಾಂತವನ್ನು ಒಪ್ಪಿಕೊಂಡಿದ್ದಾರೆ. ಸಂಘದ ಸಿದ್ಧಾಂತ ಒಪ್ಪಿಕೊಂಡು ಬರುವುದಾದರೆ ತಮಗೂ ಕೂಡಾ ಸ್ವಾಗತವಿದೆ ಎಂದು ನೇರವಾಗಿ ಚಾಟಿಯನ್ನು ಬೀಸಿದ್ದಾರೆ.

ಸದ್ಯ ಆರ್ ಎಸ್ ಎಸ್ ಸಂಘಟನೆಯ ಕುರಿತಾದ ಪರ ವಿರೋಧಗಳು ರಾಜ್ಯದಲ್ಲಿ ಕೇಳಿಬರುತ್ತಲಿದ್ದು, ಇವೆಲ್ಲವನ್ನೂ ಸುಮ್ಮನೆ ವೀಕ್ಷಿಸುತ್ತಿರುವ ಜನತಾ ಜನಾರ್ಧನ, ಸರಿಯಾದ ಉತ್ತರವನ್ನು ನೀಡುವುದಕ್ಕಾಗಿ ತನಗೆ ಒಲಿದು ಬರಲಿರುವ ಅವಕಾಶಕ್ಕಾಗಿ ಕಾದು ಕುಳಿತಿದ್ದಾನೆ.

ಇದನ್ನೂ ಓದಿರಿ: ಎಲ್​ಪಿಜಿ ಅಡುಗೆ ಸಿಲಿಂಡರ್ ಬೆಲೆ ಮತ್ತೆ ಏರಿಕೆ ಬೆಚ್ಚಿಬಿದ್ದ ಗ್ರಾಹಕ !

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here