birthday-special-of-ms-dhoni

ಭಾರತ ಕ್ರೀಕೆಟ್ ಕಂಡಂತಹ ಚಾಣಾಕ್ಷ ಆಟಗಾರ, ವಿಶೇಷ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು 39 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇವರು ಕ್ರೀಕೆಟ್ ಲೋಕದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ ಶ್ರೇಷ್ಠ ನಾಯಕ. ಅಭಿಮಾನಿಗಳ ಪಾಲಿನ ದೇವರು ನಮ್ಮ ಈ ಎಂ ಎಸ್ ಧೋನಿ.

1981 ರ ಜುಲೈ 7 ರಂದು ರಾಂಚಿಯಲ್ಲಿ ಜನಿಸಿದ ಇವರು, ಬಾಲ್ಯದಲ್ಲಿ ಹಲವಾರು ಕಷ್ಟಗಳನ್ನು ಅನುಭವಿಸಿ ಎಲೆದ್ದುಬಂದರು. ಮೊದಲಿಗೆ ರೇಲ್ವೆ ಇಲಾಖೆಯಲ್ಲಿ ಟಿಕೆಟ್ ಕಲೆಕ್ಟರ್ ವ್ರತ್ತಿಯನ್ನು ಆರಂಭಿಸಿ, ಕ್ರಿಕೆಟ್ ನ ಹುಚ್ಚು ಮತ್ತು ಏನಾದರು ಸಾಧಿಸಬೇಕೆಂಬ ಹಂಬಲದೊಂದಿಗೆ ಕ್ರೀಕೆಟ್ ಜಗತ್ತಿನಲ್ಲಿ ಹೆಮ್ಮರವಾಗಿ ಬೆಳೆದು ನಿಂತವರು.

2007 ರಲ್ಲಿ ಮೊದಲಬಾರಿಗೆ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡ ಇವರು ಐಸಿಸಿ ಟಿ20 ವಿಶ್ವಕಪ್, 2011 ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಮತ್ತು 2013 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಮೂಲಕ ಐಸಿಸಿಯ ಪ್ರಮುಖ ಮೂರು ಟ್ರೋಫಿಗಳನ್ನು ಗೆದ್ದುಕೊಟ್ಟ  ಏಕೈಕ ನಾಯಕ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಭಾರತ ತಂಡದ ನಾಯಕನಾಗಿ ಸಾಧನೆ, ಕೀಪಿಂಗ್ ನಲ್ಲಿನ ವೇಗ ಮತ್ತು ಹೆಲಿಕಾಪ್ಟರ್ ಶಾಟ್ ನಿಂದಲೇ ಅಭಿಮಾನಿಗಳ ಮನಗೆದ್ದಿದ್ದಾರೆ.

ಇವರ ಸಾಧನೆಗಳನ್ನು ಪರಿಗಣಿಸಿದ ಭಾರತ ಸರಕಾರ 2007 ರಾಜೀವ್ ಗಾಂಧಿ ಖೇಲ್ ರತ್ನ, 2009 ರಲ್ಲಿ ಪದ್ಮಶ್ರೀ ಹಾಗೂ 2018 ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನ ನೀಡಿ ಗೌರವಿಸಿದೆ. 2008 ಮತ್ತು 2009 ರಲ್ಲಿ ಸತತ ಎರಡು ಬಾರಿ ಐಸಿಸಿ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here