ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣಾ ಕಾವು ಹೆಚ್ಚಾಗಿದ್ದು, ಇಂದು ನವಾಡದಲ್ಲಿ ಪ್ರಚಾರ ಸಭೆಯನ್ನು ಉದ್ಧೇಶಿಸಿ ಮಾತನಾಡುತ್ತ ರಾಹುಲ್ ಗಾಂಧಿ, ಲಡಾಕ್ ನಲ್ಲಿ ಚೀನಾ ಆಕ್ರಮಿಸಿಕೊಂಡ ಜಾಗವನ್ನು ಯಾವಾಗ ಮರಳಿ ಪಡೆಯುತ್ತೀರಿ ಎಂದು ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಲಡಾಕ್ ನಲ್ಲಿ ಭಾರತೀಯ ಪ್ರಾಂತ್ಯದ ಒಳಗೆ ನುಸುಳಿದ್ದು, ನರೇಂದ್ರ ಮೋದಿಯವರು ದೇಶದ ಜನತೆಗೆ ಸುಳ್ಳು ಹೇಳುತ್ತಿದ್ದಾರೆ. ಇದೆ ಸಮಯದಲ್ಲಿ ನಮ್ಮ ಸೈನಿಕರು ಚೀನಾದ ಸೈನಿಕರ ವಿರುದ್ಧ ಹೋರಾಡಿ ಸಾವನ್ನಪ್ಪಿದ್ದರು. ಭಾರತದ 1200 ಚ. ಕಿ.ಮೀ. ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡು ಕುಳಿತಿದೆ. ಆದರೆ ನರೇಂದ್ರ ಮೋದಿ ಮಾತ್ರ ಚೀನಾ ಸೇನೆ ಭಾರತದ ಪ್ರಾಂತ್ಯದಲ್ಲಿ ನಿಗ್ಗಿಲ್ಲ ಎಂದು ಹೇಳುತ್ತಿದ್ದಾರೆ. ಈ ಮೂಲಕ ದೇಶದ ಜನತೆಗೆ ಮೋಸಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶವನ್ನು ಕಾಪಾಡಬೇಕಾದ ಸರಕಾರ ಜನರಲ್ಲಿ ಸುಳ್ಳು ಹೇಳಿಕೊಂಡು ಕುಳಿತಿದೆ. ಆಕ್ರಮಿಸಿಕೊಂಡಿರುವ ಪ್ರದೇಶವನ್ನು ಯಾವಾಗ ತೆರವುಗೊಳಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ. ರಾಜ್ಯದ ಮತ್ತು ದೇಶದ ಒಳಿತಿಗಾಗಿ ನಿತೀಶ್ ಕುಮಾರ್ ನೇತೃತ್ವದ ಪಕ್ಷಕ್ಕೆ ಮತವನ್ನು ನೀಡಬಾರದು ಎಂದು ಹೇಳಿದ್ದಾರೆ.
ಇನ್ನೂ ಹೆಚ್ಚಿನ ರಾಷ್ತ್ರೀಯ ಸುದ್ದಿಯನ್ನು ಓದಿರಿ