ಕೊನೆಗೂ ಬಿಗ್ ಬಾಸ್ -7 ಕಿರೀಟ ದಕ್ಕಿದ್ದು ಇವರಿಗೆ..!

bigg-boss-kannada-7-winner-kannada-bigg-boss-7-finale

ಸುಮಾರು 113 ದಿನಗಳಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು ಬಂದಿದ್ದ ಪ್ರಸಿದ್ದ ರಿಯಾಲಿಟಿ ಶೋ ಬಿಗ್ ಬಾಸ್ -7 ಇಂದಿಗೆ ಮುಕ್ತಾಯಗೊಂಡಿದೆ. ಇದರೊಂದಿಗೆ ಪ್ರೇಕ್ಷಕರನ್ನು ಉತ್ತಮವಾಗಿ ಮನರಂಜಿಸಿಕೊಂಡು ಬಂದ ಶೈನ್ ಶೆಟ್ಟಿ ಮತ್ತು ಕುರಿ ಪ್ರತಾಪ್ ಅವರು ಪೈನಲ್ ಸ್ಪರ್ಧಿಗಳಾಗಿ ಹೊರಹೊಮ್ಮಿದ್ದಾರೆ.

ಮೊದಲಿನಿಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಶೈನ್ ಶೆಟ್ಟಿ ತಮ್ಮ ನಡವಳಿಕೆಯಿಂದಲೇ ಜನರ ಮನಗೆದ್ದಿದ್ದರು. ಮತ್ತೊಂದೆಡೆ ತಮ್ಮ ಕಾಮಿಡಿ ಪ್ರವೃತ್ತಿಯಿಂದಲೇ ಪ್ರಸಿದ್ಧರಾಗಿದ್ದ ಕುರಿ ಅವರು ಉತ್ತಮ ಸ್ಪರ್ಧೆ ನೀಡಲು ನೀಡುತ್ತಿದ್ದರು. ಆದರೆ ಕೊನೆಯಲ್ಲಿ ಕುಂದಾಪುರ ಮೂಲದ ಶೈನ್ ಶೆಟ್ಟಿ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡರು.

ಈ ಮೂಲಕ ಬಿಗ್ ಬಾಸ್ -7 ಸೀಸನ್ ನ ಟ್ರೋಪಿಯನ್ನು ತಮ್ಮದಾಗಿಸಿಕೊಂಡಿರುವ ಶೈನ್ ಬಿಗ್ ಬಾಸ್ ಘೋಷಿಸಿದ್ದ 50 ಲಕ್ಷ ಹಾಗೂ ಹೆಚ್ಚುವರಿಯಾಗಿ 11 ಲಕ್ಷ ಒಟ್ಟು 61 ಲಕ್ಷ ರೂಪಾಯಿಗಳನ್ನು ತಮ್ಮದಾಗಿಸಿಕೊಂಡರು.

ಇದನ್ನೂ ಓದಿರಿ : ಸ್ವದೇಶಿ ಜಿಪಿಎಸ್ ನಿರ್ಮಿಸಿದ ಇಸ್ರೋ..! ಏನಿದರ ವಿಶೇಷತೆ..?

Shine Shetti

ಇದಕ್ಕೂ ಮುನ್ನ ಟಾಪ್ ತ್ರಿ ಸ್ಪರ್ಧಿಗಳಲ್ಲಿ ವಾಸುಕಿ ವೈಭವ್ ಅವರು ಕಾಣಿಸಿಕೊಂಡಿದ್ದು, ಕೊನೆಕ್ಷಣದಲ್ಲಿ ಹೊರನಡೆದರು. ಈ ಮೂಲಕ ಟ್ರೋಪಿ ಗೆಲ್ಲಬಹುದೆಂಬ ನೀರಿಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ.

LEAVE A REPLY

Please enter your comment!
Please enter your name here