ಬಿಗ್ ಬಾಸ್ ಕನ್ನಡ ಸೀಸನ್ 7 ಆರಂಭದಿಂದಲೂ ಕುತೂಹಲವನ್ನು ಕೆರಳಿಸುತ್ತಿದ್ದು, ಮೊದಲವಾರದಲ್ಲಿ ಸೆಲೆಬ್ರೆಟಿಯಾಗಿ ಮನೆಯನ್ನು ಪ್ರವೇಶಿಸಿದ ರವಿ ಬೆಳಗೆರೆ ಅವರು ಇತರ ಸ್ಪರ್ಧಿಗಳ ಜೊತೆಯಲ್ಲಿ ತುಂಬಾ ಖುಷಿ ಖುಷಿಯಿಂದ ಕಳೆದು ಹೊರನಡೆದರು. ಈ ಸಮಯದಲ್ಲಿ ತಮ್ಮ ಜೀವನದ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಮೊದಲ ವಾರದಲ್ಲಿ ಗುರುಲಿಂಗ ಸ್ವಾಮಿಜಿ ಹೊರನಡೆದಿದ್ದು, ಇತರ ಸ್ಪರ್ಧಿಗಳ ನಡುವೆ ಆಟ ಮುಂದುವರೆದಿದೆ. ಈ ಬಾರಿ ನೇರವಾಗಿ ಮನೆಯ ಕ್ಯಾಪ್ಟನ್ ದುನಿಯಾ ರಶ್ಮಿ ಅವರಿಂದ ಅಗ್ನಿಸಾಕ್ಷಿ ಖ್ಯಾತಿಯ ಪ್ರಿಯಾಂಕಾ ನಾಮಿನೇಟ್ ಆದರೆ ಇನ್ನುಳಿದಂತೆ ಚೈತ್ರಾ ವಾಸುದೇವನ್, ಚೈತ್ರಾ ಕೋಟುರು, ಚಂದನ್ ಆಚಾರ್, ದೀಪಿಕಾ ದಾಸ್ ಮತ್ತು ಸುಜಾತಾ ನಾಮಿನೇಟ್ ಆಗಿದ್ದಾರೆ. ಎರಡನೆಯ ಸ್ಪರ್ಧಿಯಾಗಿ ಹೊರನಡೆಯುವವರು ಯಾರು ಎಂಬ ಕುತೂಹಲವನ್ನು ಉಂಟುಮಾಡಿದ್ದ ಬಿಗ್ ಬಾಸ್, ನಿನ್ನೆ ಒಬ್ಬ ಸ್ಪರ್ಧಿಯನ್ನು ಹೊರಗೆ ಕರೆಯುವ ಮೂಲಕ ಕುತೂಹಲ ತನಿಸಿದ್ದಾರೆ.

ವಿಶೇಷವಾಗಿ ವಾರದ ಕೊನೆಯ 2 ದಿನಗಳು ಜನರನ್ನು ತನ್ನತ್ತ ಹೆಚ್ಚು ಸೆಳೆದುಕೊಳ್ಳುವ ಬಿಗ್ ಬಾಸ್, ಸುದೀಪ್ ನಿರೂಪಣೆಯಲ್ಲಿ ವಿಶೇಷವಾಗಿ ಮೂಡಿಬರುತ್ತದೆ. ಈಡೀ ವಾರದಲ್ಲಿ ನಡೆದ ಸರಿ ತಪ್ಪುಗಳನ್ನು ತುಲನೆ ಮಾಡಿ, ಕೊನೆಯಲ್ಲಿ ನಾಮಿನೇಟ್ ಆಗಿ ಹೊರನಡೆಯುವ ಸ್ಪರ್ಧಿಗಳನ್ನು ಕರೆಯುತ್ತಾರೆ. ಹಿಂದಿನ ಬಾರಿಯಂತೆ ಚೈತ್ರಾ ಕೋಟುರ್ ಈ ಬಾರಿಯೂ ನಾಮಿನೇಟ್ ಆಗಿದ್ದು, ಈ ವಾರದಲ್ಲಿ ವಿಶೇಷ ಸಂಚಲನವನ್ನೇ ಸೃಷ್ಟಿಸಿದ್ದಾರೆ. ಈ ಬಾರಿಯೂ ಜನತೆಯ ಒಟುಗಳಿಂದ ಬಚಾವಾಗಿರುವ ಚಿತ್ರಾ ಕೋಟುರ್ ಪ್ರಭಲ ಸ್ಪರ್ಧಿಯಾಗುವ ಸೂಚನೆಯನ್ನು ನೀಡಿದ್ದಂತು ಸುಳ್ಳಲ್ಲ.
ಇದನ್ನೂ ಓದಿರಿ: ದೀಪ ಬೆಳಗುವ ಮೂಲಕ ಗಿನ್ನಿಸ್ ದಾಖಲೆ ಮಾಡಿದ ಅಯೋಧ್ಯೆ ನಗರ

ಕಳೆದೊಂದು ವಾರದಿಂದ ತುಂಬಾ ಸುದ್ದಿಯಲ್ಲಿದ್ದ ಚೈತ್ರಾ ಕೋಟುರು ಈ ಬಾರಿಯ ಹೊರಹೋಗುವ ಸ್ಪರ್ಧಿಯಿಂದ ಬಚಾವಾಗಿದ್ದು, ಚೈತ್ರಾ ವಾಸುದೇವನ್ ಬಲಿಯಾಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಒಬ್ಬೊಬ್ಬರೇ ಸ್ಪರ್ಧಿಗಳು ಹೊರನದೆಯುತ್ತಿದ್ದು, ಸ್ಪರ್ಧೆ ಇನ್ನೂ ಕಠಿಣವಾಗುತ್ತ ಸಾಗುತ್ತದೆ. ಸಧ್ಯ ಮೂವರು ಹೊರನಡೆದಿದ್ದು, ಇನ್ನು ಹದಿನೈದು ಜನರ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಇದನ್ನೂ ಓದಿರಿ: ಇಂಡೋ-ಪಾಕ್ ಗಡಿಯಲ್ಲಿ ದೀಪಾವಳಿ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ