ಬಿಗ್ ಬಾಸ್ ಕನ್ನಡ ಸೀಸನ್ 7ರ ಅದ್ಧೂರಿ ಆರಂಭಕ್ಕೆ ಕ್ಷಣಗಣನೆ

ಬೆಂಗಳೂರು:  ಕಲರ್ಸ್ ಕನ್ನಡ ವಾಹಿನಿಯಲ್ಲಿ ಇಂದು ಏಳನೆಯ ಆವೃತ್ತಿಯ ಬಿಗ್ ಬಾಸ್ ಕಾರ್ಯಕ್ರಮ ಅದ್ದೂರಿಯಿಂದ ಆರಂಭವಾಗಲಿದ್ದು, ಪ್ರತಿದಿನ 9 ಗಂಟೆಗೆ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳಲಿದೆ. ಕಳೆದ ಸೀಸನ್ ನಂತೆಯೇ ಈ ಬಾರಿಯೂ ಕಿಚ್ಚಾ ಸುದೀಪ್ ನೀರೂಪಕರಾಗಿಮುಂದುವರೆಯಲಿದ್ದಾರೆ.

ಬಿಗ್ ಬಾಸ್ ಏಳನೆಯ ಆವೃತ್ತಿಯ ಆರಂಭ ಕಾರ್ಯಕ್ರಮ ಇಂದು ಸಂಜೆ 6 ಗಂಟೆಯಿಂದ ಪ್ರಸಾರವಾಗಲಿದ್ದು, ಈ ಬಾರಿ 17 ಸ್ಪರ್ಧಿಗಳು ಪಾಲ್ಗೊಳ್ಳುವ ನೀರಿಕ್ಷೆಯಿದೆ. ಈ ಬಾರಿ ಕೇವಲ ಸೆಲೆಬ್ರೇಟಿಗಳು ಮಾತ್ರ ಭಾಗವಹಿಸಲಿರುವುದು ಅತೀ ಹೆಚ್ಚು ಪ್ರೇಕ್ಷಕರನ್ನು ತನ್ನತ್ತ ಸೆಳೆಯಬಹುದು ಎಂಬ ನೀರಿಕ್ಷೆಯಲ್ಲಿ ಬಿಗ್ ಬಾಸ್ ತಂಡ ಇದೆ. ಕಳೆದ ಸೀಸನ್ ಕಲರ್ಸ್ ಸುಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮ ಈ ಬಾರಿ ಕಲರ್ಸ್ ಕನ್ನಡಕ್ಕೆ ವಾಪಸಾಗಿದೆ.

ಕಳೆದ 6 ವರ್ಷಗಳಲ್ಲಿ ಬಿಗ್ ಬಾಸ್ ಜೊತೆಯಲ್ಲಿ ಇದ್ದೇನೆ. ಈಗ ಏಳನೆಯ ಆವೃತ್ತಿ ಪ್ರಾರಂಬವಾಗುತ್ತಿದೆ, ಎಲ್ಲರಂತೆ ಸ್ಪರ್ಧಿಗಳ ಪರಿಚಯ ಮಾಡಿಕೊಳ್ಳಲು ತುಂಬಾ ಕಾತುರದಿಂದ ಕಾಯುತ್ತಿದ್ದೇನೆ. ಈ ಬಾರಿ ಸೆಲೆಬ್ರೇಟಿಗಳು ಮಾತ್ರ ಬಾಗವಹಿಸುತ್ತಿರುವುದರಿಂದ ಹೆಚ್ಚು ಆಕರ್ಷಣೆಯನ್ನು ಹೊಂದಿದೆ ಎಂದು ಬಿಗ್ ಬಾಸ್ ಕಾರ್ಯಕ್ರಮದ ನೀರೂಪಕ ಸುದೀಪ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here