ನವದೆಹಲಿ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಹತ್ವದ ಯಶಸ್ಸು ದೊರೆತಿದೆ. ಮೆಹ್ರೋಲಿ ಅರಣ್ಯ ಪ್ರದೇಶದಲ್ಲಿ ದೊರೆತ ಮೂಳೆಯ ಚೂರುಗಳು ಶ್ರದ್ಧಾ ವಾಕರ್ ಅವಳದ್ದೇ ಎನ್ನುವ ಮಹತ್ವದ ವಿಷಯ ಗೊತ್ತಾಗಿದೆ.
ಶ್ರದ್ಧಾ ಹತ್ಯೆ ಪ್ರಕರಣದ ತನಿಖೆ ನಡೆಸುವ ಸಮಯದಲ್ಲಿ ಮೃತದೇಹದ ತುಂಡುಗಳನ್ನು ಎಸೆದಿರುವ ಸ್ಥಳದ ಮಹಜರು ಮಾಡುವಾಗ ದೊರೆತ ಮೂಳೆಗಳನ್ನು ಡಿಎನ್ ಎ ಟೆಸ್ಟ್ ನಡೆಸಲು ಕಳುಹಿಸಿ ಕೊಡಲಾಗಿತ್ತು. ಸದ್ಯ ಅದರ ವರದಿಯು ಪೋಲೀಸರ ಕೈ ಸೇರಿದ್ದು, ಶ್ರದ್ಧಾ ತಂದೆ ಡಿಎನ್ ಎ ಯೊಂದಿಗೆ ಮ್ಯಾಚ್ ಆಗಿದೆ.
ಇದನ್ನೂ ಓದಿರಿ: ತವಾಂಗ್ ಘರ್ಷಣೆ ನಡುವೆಯೇ ಅಗ್ನಿ 5 ಕ್ಷಿಪಣಿ ಯಶಸ್ವಿ ಪರೀಕ್ಷಾರ್ಥ ಉಡಾವಣೆ ಮಾಡಿದ ಭಾರತ!
ಶ್ರದ್ಧಾ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಹತ್ವದ ಸಾಕ್ಷಿಯೊಂದು ದೊರೆತಂತಾಗಿದ್ದು, ಇದು ಮುಂದಿನ ತನಿಖೆಗೆ ಸಹಾಯಕವಾಗಲಿದೆ. ಪ್ರಕರಣಕ್ಕೆ ಮಹತ್ವದ ಸಾಕ್ಷ್ಯ ಸಿಕ್ಕಿರುವುದರಿಂದ ಕೊಲೆ ಆರೋಪಿ ಅಫ್ತಾಬ್ ಪೂನಾವಾಲಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಪೊಲೀಸರು ತಯಾರು ಮಾಡಿಕೊಳ್ಳುತ್ತಿದ್ದಾರೆ. ಈ ಮೊದಲು ಅಫ್ತಾಬ್ ಪೊಲೀಸರ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದವು.