ನವದೆಹಲಿ: ಕೃಷಿ ಕಾನೂನು ರದ್ದತಿ ಮಸೂದೆ 2021 ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ. ಕಳೆದ ಸೋಮವಾರ ಸಂಸತ್ತಿನ ಉಭಯ ಸದನಗಳಲ್ಲಿ ಧ್ವನಿ ಮತಗಳಲ್ಲಿ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಕ್ಕೆ ಅನುಮೋದನೆ ದೊರೆತಿತ್ತು.
ನರೇಂದ್ರ ಮೋದಿಯವರು ಗುರುನಾನಕ್ ಜಯಂತಿಯಂದು ರೈತರು ವಿರೋಧಿಸಿ ಪ್ರತಿಭಟಿಸುತ್ತಿರುವ ಕೃಷಿ ಕಾನೂನು ರದ್ದತಿ ಮಸೂದೆ 2021 ನ್ನು ವಾಪಸ್ ಪಡೆದಿದ್ದರು. ಆ ಬಳಿಕ ಕಳೆದ ಸೋಮವಾರ ಸಂಸತ್ತಿನ ಉಭಯ ಸದನಗಳಲ್ಲಿ ಧ್ವನಿ ಮತದ ಮೂಲಕ ಕೃಷಿ ಕಾನೂನು ರದ್ದತಿಗೆ ಅನುಮೋದನೆ ಪಡೆಯಲಾಯಿತು.
ಮಸೂದೆ ರದ್ದತಿಯ ಕುರಿತು ವಿಪಕ್ಷಗಳು ಚರ್ಚೆ ನಡೆಸಬೇಕು ಎಂದು ಗದ್ದಲದ ಎಬ್ಬಿಸಿದರು, ಇದರ ನಡುವೆಯೂ ಅಂಗೀಕಾರ ಮಾಡಲಾಗಿದೆ. ಬಳಿಕ ಮೂರು ಕೃಷಿ ಮಸೂದೆಗಳ ರದ್ದತಿ ಮಸೂದೆಗೆ ಇಂದು ರಾಷ್ಟ್ರಪತಿ ಕೋವಿಂದ್ ಅಂಕಿತ ಹಾಕಿದ್ದಾರೆ.
ಇದನ್ನೂ ಓದಿರಿ: ಗ್ರಾಹಕರಿಗೆ ಮತ್ತೆ ಹೊರೆ; ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ !