
ಭಾರತ ದೇಶವು ಧಕ್ಷ ನಾಯಕತ್ವವನ್ನು ಪಡೆದ ನಂತರ ಅಭಿವೃದ್ಧಿಯೆಡೆಗೆ ದಾಪುಗಾಲಿಡುತ್ತಿದೆ. ಮೋದಿಜಿಯವರು ದೇಶದ ಜನತೆಗೆ ಒಂದಿಲ್ಲೊಂದು ಒಳ್ಳೆಯ ಅಭಿವೃದ್ಧಿಪರವಾದ ಯೋಜನೆಗಳನ್ನು ಜಾರಿ ಮಾಡುತ್ತಿದ್ದಾರೆ. ಅಂತೆಯೇ ಕನ್ನಡಿಗರ ಬಹುದಿನದ ಬೇಡಿಕೆಯೊಂದನ್ನು ಪೂರೈಸಲು ಸಿದ್ಧರಾಗಿದ್ದಾರೆ ಎಂಬ ಸುದ್ದಿಯು ಕೇಳಿ ಬರುತ್ತಿದೆ. ಈ ಮೂಲಕ ಕನ್ನಡಿಗರ ಕನಸನ್ನು ನನಸು ಮಾಡುವ ಪ್ರಯತ್ನ ಮಾಡಲಿ ಎಂಬುವುದು ನಮ್ಮೆಲ್ಲರ ಆಶಯ…
ಅನೇಕ ವರ್ಷಗಳಿಂದ ಯಾವುದೇ ಫಲಾಪೇಕ್ಷೆಗಳಿಲ್ಲದೆ ಸಮಾಜದ ಒಳಿತಿಗಾಗಿ ಶ್ರೀ ಶಿವಕುಮಾರ ಸ್ವಾಮಿಗಳು ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಇವರು ಅಕ್ಷರ, ಆಹಾರ ಮತ್ತು ಜ್ಞಾನವನ್ನು ಯಾವುದೇ ಜಾತಿ ಬೇದ ಎಣಿಸದೆ ನೀಡುತ್ತ ಬಂದಿದ್ದಾರೆ. ಇವರ ಸಮಾಜಮುಖಿ ಸೇವೆಗಳಿಂದಾಗಿ ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರ ಈ ಸಾಧನೆಯನ್ನು ಗುರುತಿಸಿ ದೇಶದ ಅತ್ಯುನ್ನತ ಗೌರವಾದ ಭಾರತ ರತ್ನ ಪ್ರಶಸ್ತಿ ನೀಡಿ ಗೌರವ ಸಮರ್ಪಣೆ ಮಾಡಬೇಕೆಂದು ಕನ್ನಡಿಗರ ಆಶಯವಾಗಿದೆ.
ಇದನ್ನೂ ಓದಿರಿ : 2019 ರ ಚುನಾವಣೆಯ ಬಳಿಕವೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ : ನಿತೀಶ್ ಕುಮಾರ್

ಮಾರ್ಚ್ 3, 1930 ರಲ್ಲಿ ದೀಕ್ಷೆ ಪಡೆದು ಶ್ರೀ ಶಿವಕುಮಾರ ಮಹಾ ಸ್ವಾಮಿಗಳು, ಯಾವುದೇ ಧರ್ಮಕ್ಕೆ ಸೀಮಿತರಾಗದೆ ಸಮಾಜದ ಉದ್ಧಾರಕ್ಕಾಗಿ ಮತ್ತು ನಿರ್ಗತಿಕರ ಆಹಾರ, ಶಿಕ್ಷಣ ಮತ್ತು ಜ್ಞಾನದ ದಾಹವನ್ನು ತಣಿಸುತ್ತ ಬಂದಿದ್ದಾರೆ. ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ದೇಶಕ್ಕಾಗಿ ಸತ್ಪ್ರಜೆಗಳನ್ನು ತಯಾರು ಮಾಡುತ್ತಿದ್ದಾರೆ. ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಮೂಲಕ ಪ್ರಾಥಮಿಕ ಶಿಕ್ಷಣದಿಂದ ಎಂಜಿನಿಯರಿಂಗ ಕಾಲೇಜುಗಳವರೆಗೆ ಮತ್ತು ಸಂಸ್ಕೃತ ವಿಧ್ಯಾರ್ಜನೆಯ ಸೌಲಭ್ಯವನ್ನು ಒದಗಿಸಿಕೊಟ್ಟಿದ್ದಾರೆ.
ಬಡವರ ಮತ್ತು ದಿಕ್ಕಿಲ್ಲದವರಿಗೆ ಆಶ್ರಯ ನೀಡಿ, ಅವರ ಆಸಕ್ತಿಯ ಮೇರೆಗೆ ಶಿಕ್ಷಣ ನೀಡುವ ಮೂಲಕ ಅವರನ್ನು ಮಹಾನ್ ವ್ಯಕ್ತಿಗಳನ್ನಾಗಿ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಸಾಧನೆಗಳ ನಡುವೆ ತಮ್ಮ ದಿನನಿತ್ಯದ ಪೂಜೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ. ಇಷ್ಟೆಲ್ಲ ಸಮಾಜದ ಉದ್ದಾರಕ್ಕೆ ಶ್ರಮಿಸಿದ ಸ್ವಾಮೀಜಿಗಳಿಗೆ ಭಾರತರತ್ನ ಲಭಿಸಬೇಕೆಂಬುದು ಬಹುಜನರ ಒತ್ತಾಯವಾಗಿದ್ದು, ಅದು ಕೈಗೂಡುವ ಕ್ಷಣ ಸನ್ನಿಹಿತವಾಗಿದೆ. ಈ ನಡುವೆ ನರೇಂದ್ರ ಮೋದಿಯವರ ಸರಕಾರದಿಂದ ಅವರಿಗೆ ಪ್ರಶಸ್ತಿ ನೀಡಬೇಕೆಂದು ಒತ್ತಾಯಕೇಳಿಬಂದ ಹಿನ್ನೆಲೆಯಲ್ಲಿ , ಅವರಿಗೆ ಭಾರತರತ್ನ ನೀಡಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ.
ಇದನ್ನೂ ಓದಿರಿ : ಮೇಲ್ವರ್ಗದ ಬಡವರಿಗೆ ಮೋದಿಜಿ ಕೊಟ್ರು ಭರ್ಜರಿ ಆಪರ್…!
Image Copyright : google.com