ಮಾಂಡೌಸ್ ಚಂಡಮಾರುತದ ಎಫೆಕ್ಟ್; ಬೆಂಗಳೂರಿನಲ್ಲಿ ಮುಂಜಾನೆಯಿಂದಲೇ ತುಂತುರು ಮಳೆ, ಮೈ ಕೊರೆವ ಚಳಿ

bengaluru-rain-chilling-weather-continues-in-bangalore-2-more-days-karnataka-rains-cyclone-mandous

ಬೆಂಗಳೂರು: ತಮಿಳುನಾಡಿನಲ್ಲಿ ಮಾಂಡೌಸ್ ಚಂಡಮಾರುತದ (Mandous cyclone) ಅಬ್ಬರದ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಮಳೆಯಾಗುತ್ತಿದೆ. ಶುಕ್ರವಾರ ಮುಂಜಾನೆಯಿಂದಲೇ ಬೆಂಗಳೂರಿನಲ್ಲಿ ತುಂತುರು ಮಳೆ ಶುರುವಾಗಿದ್ದು, ವಿಪರೀತ ಚಳಿಯೂ ಆರಂಭವಾಗಿದೆ.

ಮಾಂಡೌಸ್ ಚಂಡಮಾರುತದ ಪರಿಣಾಮ ರಾಜ್ಯದಲ್ಲಿ 2-3 ದಿನ ಮುಂದುವರೆಯುವ ಸೂಚನೆಗಳಿವೆ. ಅಲ್ಲಿಯವರೆಗೆ ದಕ್ಷಿಣ ಮತ್ತು ಕರಾವಳಿ ಕರ್ನಾಟಕದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಶುಕ್ರವಾರ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 21.6 ಡಿಗ್ರಿ ದಾಖಲಾಗಿತ್ತು. ಇದು ಕಳೆದ ವಾರದಲ್ಲಿ ವರದಿಯಾದ 26-28 ಡಿಗ್ರಿ ಸೆಲ್ಸಿಯಸ್​​ಗಿಂತ ಕಡಿಮೆಯಾಗಿದೆ. ಚಂಡಮಾರುತದಿಂದ ಚಳಿ, ಬಿರುಗಾಳಿ ಮತ್ತು ಮೋಡ ಕವಿದ ವಾತಾವರಣದಿಂದಾಗಿ ಬೆಂಗಳೂರಿನಲ್ಲಿ ವಿಪರೀತ ಚಳಿಯ ವಾತಾವರಣವಿದೆ. ಶುಕ್ರವಾರ ಸಂಜೆ 7 ಗಂಟೆಯ ಹೊತ್ತಿಗೆ ಚಂಡಮಾರುತವು ಚೆನ್ನೈ ಕರಾವಳಿಗೆ ಸಮೀಪಿಸಿದ್ದು, ಅಲ್ಲಿ ತೀವ್ರ ಮಳೆಯಾಗಿದೆ.

ಇದನ್ನೂ ಓದಿರಿ: ರಾಮಾಚಾರಿ ವೆಡ್ಡಿಂಗ್ ಅನಿವರ್ಸರಿ; ರಕಿಬಾಯ್ ಗೆ ಏನಂದ್ರು ರಾಧಿಕಾ

LEAVE A REPLY

Please enter your comment!
Please enter your name here