bengaluru-police-fined-rs-1-lakh-for-firs-on-troll-page-admin

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬದ ಬಗ್ಗೆ ‘ಟ್ರೋಲ್ ಮಗಾ’ ಫೇಸ್ಬುಕ್ ಪೇಜ್ ನಲ್ಲಿ ಟ್ರೋಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮ್ಮಿಶ್ರ ಸರಕಾರ ಫೇಜ್ ಅಡ್ಮಿನ್ ಅವರ ಮೇಲೆ ಕೋಪಗೊಂಡು ಶ್ರೀರಾಮ್ ಪುರ ಪೋಲಿಸ್ ಟಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಜ್ ಅಡ್ಮಿನ್ ಜಾಮೀನನ್ನು ಪಡೆದಿದ್ದರು. ಜಾಮಿನನ್ನು ಪಡೆದಿರುವುದಾಗಿ ಹೇಳಿ ಪೋಲಿಸರಿಗೆ ತಿಳಿಸಲು ಹೋದ ವ್ಯಕ್ತಿಯ ಮೇಲೆ ಪುನಃ ಪ್ರಕರಣ ಎಫ್ ಐಆರ್ ದಾಖಲಿಸಿ ಅರೆಸ್ಟ್ ಮಾಡಿತ್ತು. ಆರೋಪಿ ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಮೈತ್ರಿ ಸರಕಾರಕ್ಕೆ ಚಿಮಾರಿ ಹಾಕಿದೆ.

ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಫಣೀಂದ್ರ ಅವರ ಏಕಸದಸ್ಯ ಪೀಠ ಈ ಆದೇಶವನ್ನು ಹೊರಡಿಸಿದೆ.  ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಅಕ್ರಮವಾಗಿ ಬಂಧಿಸಿದ್ದ ಅಧಿಕಾರಿಗಳ ಕುರಿತು ತನಿಕೆಯನ್ನು ನಡೆಸುವಂತೆ ಆದೇಶವನ್ನು ನೀಡಿದ್ದಾರೆ. ಮಾನ್ಯ ನ್ಯಾಯಾಲಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಸರಕಾರಕ್ಕೆ ಚಿಮಾರಿ ಹಾಕಿ, ಅಧಿಕಾರಿಗಳಿಂದ ಕಡ್ಡಾಯವಾಗಿ 1 ಲಕ್ಷ ರೂಪಾಯಿಗಳನ್ನು ದಂಡ ವಸೂಲಿ ಮಾಡುವಂತೆಯೂ ಆದೇಶ ನೀಡಿದೆ.

bengaluru-police-fined-rs-1-lakh-for-firs-on-troll-page-admin

ಇದನ್ನೂ ಓದಿರಿ: ರಾಜನಾಥ ಸಿಂಗ್ ಅವರ ರಫೇಲ್ ಪೂಜೆ ಬರೀ ನಾಟಕ ಎಂದ ಮಲ್ಲಿಕಾರ್ಜುನ್ ಖರ್ಗೆ

LEAVE A REPLY

Please enter your comment!
Please enter your name here