ಕೊಲ್ಕತ್ತಾ: ಎರಡೆರಡು ಬಾರಿ ಕ್ಯಾನ್ಸರ್ ಮಹಾಮಾರಿಯಿಂದ ಬಚಾವಾಗಿ ಬಂದಿದ್ದ ಬೆಂಗಾಲಿ ಖ್ಯಾತ ನಟಿ ಎಂಡ್ರೀಲಾ ಶರ್ಮಾ (Aindrila Sharma) ಬ್ರೈನ್ ಸ್ಟ್ರೋಕ್‌ನಿಂದ ಭಾನುವಾರ ಸಾವನ್ನಪ್ಪಿದ್ದಾರೆ.
ನಟಿ ಎಂಡ್ರೀಲಾ ಶರ್ಮಾ ಎರಡು ಬಾರಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಕ್ಯಾನ್ಸರ್ ಗೆದ್ದ ನಟಿ ಮತ್ತೆ ಬಣ್ಣ ಹಚ್ಚಲು ಸ್ಜಜಾಗಿದ್ದರು. ಆದರೆ ಇದ್ದಕ್ಕಿದ್ದಂತೆ ನವೆಂಬರ್ 1 ರಂದು ಬ್ರೈನ್ ಸ್ಟ್ರೋಕ್ ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಮೆದುಳಿನ ಎದುರು ಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವ ಕುರಿತು ಮಾಹಿತಿ ನೀಡಿದ್ದ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ದಿನಕಳೆದಂತೆ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಲೇ ಹೋಯಿತು. ಇದರ ನಡುವೆ ಅವರಿಗೆ ನವೆಂಬರ್ 14 ರಂದು ಹಲವು ಬಾರಿ ಹೃದಯ ಸ್ತಂಭನ ಉಂಟಾಗಿತ್ತು.
ಐಂದ್ರಿಲಾ ಶರ್ಮಾ ಅವರು ಬಂಗಾಳಿಯ ‘ಜಿಯೋನ್ ಕಥಿ’, ‘ಜುಮುರ್’ ಮತ್ತು ‘ಜಿಬಾನ್ ಜ್ಯೋತಿ’ ಯಂತಹ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಧಾರಾವಾಹಿ ಜೊತೆಗೆ ವೆಬ್ ಸರಣಿಯಲ್ಲಿ ಮಿಂಚಿದ್ದಾರೆ. ಇತ್ತೀಚೆಗೆ ‘ಭಾಗರ್’ ವೆಬ್ ಸರಣಿಯನ್ನು ಮುಗಿಸಿದ್ದರು. ಬಳಿಕ ಅಂಡ್ರಿಯಾ ಸ್ಥಿತಿ ಗಂಭೀರವಾಗಿತ್ತು. ಜೀವನದಲ್ಲಿ ಕಠಿಣ ಹೋರಾಟ ನಡೆಸಿ ಕೇವಲ 24 ನೇ ವಯಸ್ಸಿಗೆ ಬದುಕು ನಿಲ್ಲಿಸಿ ಹೊರಟು ಹೋಗಿದ್ದಾರೆ.
ಇದನ್ನೂ ಓದಿರಿ: ಆಟೋದಲ್ಲಿ ನಿಗೂಢ ಸ್ಫೋಟ: ಓರ್ವನನ್ನು ವಶಕ್ಕೆ ಪಡೆದ ಪೊಲೀಸರು