BC Patil Decided to 6 days self quarantine

ಬೆಂಗಳೂರು: ರಾಜ್ಯದ ಕೃಷಿ ಸಚಿವ ಬಿಸಿ ಪಾಟೀಲ್ ಅವರ ಸಂಬಂಧಿಕರೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅವರ ಸಂಪರ್ಕದಲ್ಲಿದ್ದ ಕಾರಣಕ್ಕೆ ಬಿಸಿ ಪಾಟೀಲ್ ಅವರು ಆರು ದಿನಗಳ ಕಾಲ ಮನೆಯಲ್ಲಿಯೇ ಕ್ವಾರಂಟೈನ್ ಆಗಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

– ಜಾಹಿರಾತು –

Aghoro jyotishya ad

ಕೊರೊನಾ ಸೋಂಕಿನಿಂದ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಹಲವು ಶಾಸಕರು ಮತ್ತು ಸಚಿವರು ಮನೆಯಲ್ಲಿಯೇ ಕೂರುವಂತಾಗಿದೆ. ಬೆಂಗಳೂರಿನ ಮಿನಿಸ್ಟರ್ ಕ್ವಾಟರ್ಸ್ ನಲ್ಲಿ ಇರುವ ಸಚಿವರ ಸಂಬಂಧಿಕರೋಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಆತಂಕವನ್ನು ಉಂಟುಮಾಡಿದೆ. ಅವರ ಸಂಪರ್ಕದಲ್ಲಿದ್ದ ಬಿಸಿ ಪಾಟೀಲ್ ಅವರು ಮುಂಜಾಗ್ರತೆಗಾಗಿ ಆರು ದಿನಗಳ ಕಾಲ ಮನೆಯಲ್ಲಿಯೇ ಕ್ವಾರಂಟೈನ್ ಆಗಲು ನಿರ್ಧರಿಸಿದ್ದಾರೆ.


ತಮ್ಮ ಟ್ವೀಟರ್ ನಲ್ಲಿ ಈ ಸಂಬಂಧ ಪೋಸ್ಟ್ ಮಾಡಿರುವ ಸಚಿವರು, “ಬೆಂಗಳೂರಿನ ಮಿನಿಸ್ಟರ್ ಕ್ವಾಟರ್ಸ್ ನಲ್ಲಿ, ನನ್ನ ಸಂಬಂಧಿಕರೊಬ್ಬರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಈ ನಿಟ್ಟಿನಲ್ಲಿ ಅವರ ಜೊತೆ ಸಂಪರ್ಕದಲ್ಲಿ ಇದ್ದ, ನಾನು ಹಿರೇಕೆರೂರಿನ ಮನೆಯಲ್ಲಿ ಕ್ವಾರಂಟೈನ್  ಆಗುತ್ತಿದ್ದು, ನನ್ನ ಕುಟುಂಬಸ್ಥರು ಹಾಗೂ ಸಿಬ್ಬಂದಿ ವರ್ಗದವರು ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ಕ್ವಾರಂಟೈನ್ ಆಗುತ್ತಿದ್ದಾರೆ” ಎಂದು ಬರೆದಿದ್ದಾರೆ.

ಕೊರೊನಾ ವೇಗವಾಗಿ ಹಬ್ಬುತ್ತಿರುವ ಈ ಸಮಯದಲ್ಲಿ ನಾಡಿನ ಜನತೆಗೆ, “ಕೊರೋನಾ ಹಬ್ಬುತ್ತಿರುವುದರಿಂದ, ಎಲ್ಲರೂ ಮನೆಯಲ್ಲಿ ಸುರಕ್ಷಿತವಾಗಿರಿ, ಹೊರಗೆ ಬರಲೇ ಬೇಡಿ, ಮನೆಯಿಂದ ಹೊರಗೆ ಬರಲೇ ಬೇಕಾದ ಸಂದರ್ಭವಿದ್ದಲ್ಲಿ, ಆಗಾಗ ಕೈ ತೊಳೆಯುತ್ತಾ, ಸ್ಯಾನಿಟೈಜರ್ ಬಳಸುತ್ತಾ, ಅಂತರ ಕಾಯ್ದುಕೊಂಡು, ಸರ್ಕಾರದ ನಿಯಮಗಳನ್ನು ಚಾಚೂತಪ್ಪದೇ ಪಾಲಿಸಿ” ಎಂದು ಬಿಸಿ ಪಾಟೀಲ್ ಅವರು ಸಲಹೆಯನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here