barber-family-socially-boycotted-fined-rs-50000-for-offering-haircut-to-members-of-sc-st-communities-01

ಮೈಸೂರು: ನಂಜನಗೂಡು ತಾಲ್ಲೂಕಿನ ಹಲ್ಲಾರೆ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರಿಗೆ ಕ್ಷೌರ ಮಾಡಿದ ಕಾರಣಕ್ಕೆ ಕ್ಷೌರಿಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ಕ್ಷೌರಿಕ ಮಂಜುನಾಥ್ ಶೆಟ್ಟಿ ಎಂಬವರು ಪರಿಶಿಷ್ಟ ಜಾತಿ ಜನರಿಗೆ ಹೇರ್ ಕಟಿಂಗ್ ಮಾಡಲು ಹಲ್ಲಾರೆ ಗ್ರಾಮದಲ್ಲಿ ಸೆಲೂನ್ ತೆರೆದಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪರಿಶಿಷ್ಟ ಪಂಗಡದ ಮುಖಂಡರು ಸಾಮಾಜಿಕ ಬಹಿಷ್ಕಾರ ವಿಧಿಸಿದ್ದಲ್ಲದೇ ಗ್ರಾಮದ ಮುಖ್ಯಸ್ಥರು 50 ಸಾವಿರ ರೂ. ದಂಡ ವಿಧಿಸಿದ್ದರು. ಇದರಿಂದ ನೊಂದಿರುವ ಮಂಜುನಾಥ್ ಶೆಟ್ಟಿ ನಂಜನಗೂಡು ತಾಲೂಕು ಆಡಳಿತಕ್ಕೆ ದೂರು ಸಲ್ಲಿಸಿದ್ದಾರೆ.

ಪರಿಶಿಷ್ಟ ಸಮುದಾಯದ ಸದಸ್ಯರಿಗೆ ಕ್ಷೌರ ಮಾಡಿದಕ್ಕಾಗಿ ಈ ಹಿಂದೆ ಮೂರ ಬಾರಿ ದಂಡ ಕಟ್ಟಿದ್ದೇನೆ. ನನಗೆ ಚನ್ನನಾಯಕ ಮತ್ತು ಇತರರು ಹಿಂಸೆ ನೀಡುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಲ್ಲಿಕಾರ್ಜುನ ಶೆಟ್ಟಿ ತಿಳಿಸಿದ್ದಾರೆ.

ಇತ್ತೀಚೆಗೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಜನರಿಗಾಗಿ ಕ್ಷೌರದಂಗಡಿ ಪ್ರಾರಂಭಿಸುವುದಾಗಿ ಘೋಷಿಸಿದ ಬಳಿಕ ಮಂಜುನಾಥ್ ಶೆಟ್ಟಿ ಪರಿಶಿಷ್ಟ ಜಾತಿ ಜನರಿಗೆ ಕ್ಷೌರ ಮಾಡಲು ಮುಂದಾಗಿದ್ದರು. ಇದಕ್ಕೆ ಗ್ರಾಮದ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ತಾಲೂಕು ಆಡಳಿತ ಮಧ್ಯಪ್ರವೇಶಿಸಿ ಪರಿಶಿಷ್ಟ ಜನರಿಗೆ ಕಟಿಂಗ್ ಮಾಡಲು ಮನವೊಲಿಸಿತ್ತು. ಈಗ ಮತ್ತೆ ಮಂಜುನಾಥ್ ಶೆಟ್ಟಿ ಅವರಿಗೆ ಸಾಮಾಜಿಕ ಬಹಿಷ್ಕಾರದ ಜತೆಗೆ 50 ಸಾವಿರ ರೂ. ದಂಡ ವಿಧಿಸಲಾಗಿದೆ.

barber-family-socially-boycotted-fined-rs-50000-for-offering-haircut-to-members-of-sc-st-communities-01ನನಗೆ ಮತ್ತು ಕುಟುಂಬಸ್ಥರಿಗೆ ಈ ಹಿಂಸೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಿಕೊಡದಿದ್ದರೆ ಅನಿವಾರ್ಯವಾಗಿ ಕುಟುಂಬ ಸಮೇತವಾಗಿ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗಳ ಬಳಿಯಲ್ಲಿ ಹೇಳಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಈ ಘಟನೆಯು 21ನೇ ಶತಮಾನದಲ್ಲಿಯೂ ಜಾತಿ ಜಾತಿಗಳ ನಡುವಿನ ತಾರತಮ್ಯ ಇನ್ನೂ ಉಳಿದುಕೊಂಡಿರುವುದನ್ನು ತೋರಿಸುತ್ತದೆ. ನಾವು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರೆದಿದ್ದರು ಇಂತಹ ಘಟನೆಯಲ್ಲಿ ತಲೆತಗ್ಗಿಸುವಂತೆ ಮಾಡುತ್ತವೆ.

LEAVE A REPLY

Please enter your comment!
Please enter your name here