balakot-hero-abhinandan-vardhaman-veera-chakra-award

ನವದೆಹಲಿ: ವೈಮಾನಿಕ ಯುದ್ಧದಲ್ಲಿ ಪಾಕಿಸ್ತಾನದ ಎಫ್ -16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಬಾಲಕೋಟ್ ಹೀರೊ ಅಭಿನಂದನ್ ವರ್ಧಮಾನ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಷ್ಠಿತ “ವೀರಚಕ್ರ” ಪ್ರಶಸ್ತಿ ಪ್ರದಾನ ಮಾಡಿದರು.

ಬಾಲಾಕೋಟ್ ವೈಮಾನಿಕ ದಾಳಿಯ ಮಾರನೇ ದಿನ, ಅಂದರೆ ಫೆ.27 ರಂದು ಪಾಕ್​ನ ಎಫ್​​-16 ಯುದ್ಧ ವಿಮಾನವು ಭಾರತ ಸೇನೆಯನ್ನು ಗುರಿಯಾಗಿಸಿಕೊಂಡು ಮತ್ತೊಂದು ದಾಳಿ ನಡೆಸಲು ಬರುತ್ತಿತ್ತು. ಇದನ್ನು MiG-21 ಜೆಟ್​​ನಿಂದ ವಿಂಗ್​ ಕಮಾಂಡರ್​ ಆಗಿದ್ದ ಅಭಿನಂದನ್ ಹೊಡೆದುರುಳಿಸಿ, ಪಾಕ್ ಗಡಿಯೊಳಗೆ ಬಿದ್ದಿದ್ದರು.

ಪಾಕ್ ಗಡಿಯೊಳಗೆ ಬಿದ್ದಿದ್ದ ಅವರನ್ನು ಪಾಕಿಸ್ತಾನ ವಶಕ್ಕೆ ಪಡೆದಿತ್ತು. ಈ ವಿಷಯದಲ್ಲಿ ಅಂತರರಾಷ್ಟ್ರೀಯ ಹಸ್ತಕ್ಷೇಪದ ಜೊತೆಗೆ ಭಾರತದ ಕಡೆಯಿಂದ ಹೇರಿದ ವ್ಯಾಪಕ ಒತ್ತಡದಿಂದಾಗಿ ಪಾಕಿಸ್ತಾನದ ಸೇನೆಯು ಅವರನ್ನು ಬಿಡುಗಡೆ ಮಾಡಿತ್ತು.

ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ರಕ್ಷಣಾ ಹೂಡಿಕೆ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಭಿನಂದನ್ ವರ್ಧಮಾನ್ ಅವರಿಗೆ ವೀರ ಚಕ್ರ ಪ್ರಶಸ್ತಿ ಪ್ರದಾನ ಮಾಡಿದರು.

LEAVE A REPLY

Please enter your comment!
Please enter your name here