ನವದೆಹಲಿ : ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಪ್ರಚೋದಿಸಿದ ಆರೋಪದಮೇಲೆ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ ಸೇರಿದಂತೆ ಒಟ್ಟು 32 ಜನರ ವಿರುದ್ಧ ಹೂಡಲಾದ ಪ್ರಕರಣಕ್ಕೆ ಸಮಬಂಧಿಸಿದಂತೆ ಸಿಬಿಐ ನ್ಯಾಯಾಲಯ ಇಂದು ಅವರೆಲ್ಲ ನಿರ್ದೋಷಿಗಳು ಎಂದು ತೀರ್ಪು ನೀಡಿದೆ.
ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಎಸ್ ಕೆ ಯಾದವ್ ನೇತೃತ್ವದ ನ್ಯಾಯಪೀಠ ಸುದೀರ್ಘ ವಿಚಾರಣೆ ನಡೆಸಿ, ಈ ಘಟನೆಯು ಪೂರ್ವನಿಯೋಜಿತ ಕೃತ್ಯವಲ್ಲ. ಆರೋಪಿಗಳೇ ಪಿತೂರಿ ನಡೆಸಿ ಪ್ರಚೋದಿಸಿದ್ದಾರೆ ಎನ್ನಲು ಯಾವುದೇ ಪ್ರಬಲ ಸಾಕ್ಷ್ಯವು ದೊರೆತಿಲ್ಲ. ಆದರಿಂದ ಎಲ್ಲಾ ೩೨ ಆರೋಪಿಗಳು ದೋಷಮುಕ್ತ ಎಂದು ಪ್ರಕಟಿಸಿದೆ.
ಪ್ರಕರಣದ ಮೂಲವೇನು ?
ಅಯೋಧ್ಯೆ ಶ್ರೀ ರಾಮನ ಜನ್ಮಭೂಮಿಯಾಗಿದ್ದು, ಮರ್ಯಾದಾ ಪುರುಷೋತ್ತಮನ ಮಂದಿರವನ್ನು ಕೆಡವಿ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದು ಕರಸೇವಕರ ವಾದವಾಗಿತ್ತು. ಈ ಕುರಿತಂತೆ ಮಂದಿರವನ್ನು ಮತ್ತೆ ಪಡೆದೇ ತೀರುತ್ತೇವೆ ಎಂದು ಹೋರಾಟ ಸಾವಿರಾರು ಕರಸೇವಕರ ತಂಡ 1992 ಡಿಸೇಂಬರ್ 6 ರಂದು ಮಸೀದಿಯನ್ನು ಧ್ವಂಸಗೊಳಿಸಿದರು.