ಆ ಒಂದು ತಪ್ಪಿನಿಂದಾಗಿ ಕೋಪಗೊಂಡ ಅಯ್ಯಪ್ಪ ರಾಜರಾಣಿ ಕಾರ್ಯಕ್ರಮದಿಂದ ಹೊರನಡೆದಿದ್ದಾರೆ ! ಕಾರಣವೇನೆಂದು ಓದಿ ನೋಡಿ

ayyappa-left-the-rajarani-program

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ “ರಾಜರಾಣಿ” ಕಾರ್ಯಕ್ರಮವನ್ನು ನೀವು ತಪ್ಪದೇ ನೋಡುತ್ತೀರಲ್ಲವೇ ? ನಟಿ ತಾರಾ ಮತ್ತು ಸೃಜನ್ ಲೋಕೇಶ್ ಅವರು ಜಡ್ಜಸ್ ಆಗಿ ರಿಯಲ್ ಜೋಡಿಗಳ ಸ್ಪರ್ಧೆಯನ್ನು ವೀಕ್ಷಿಸುತ್ತಿದ್ದಾರೆ. ಈ ಕಾರ್ಯಕ್ರಮ ಸದ್ಯ ನೋಡುಗರ ಫೇವರೆಟ್ ಕಾರ್ಯಕ್ರಮವಾಗಿದ್ದು, ಕಲರ್ಸ್ ಕನ್ನಡ ವಾಹಿನಿಗೆ ಉತ್ತಮ ಟಿ ಆರ್ ಪಿಯನ್ನು ಒದಗಿಸಿಕೊಟ್ಟಿದೆ.

ಈ ಕಾರ್ಯಕ್ರಮದಲ್ಲಿ ಅನುಪಮಾ ಅವರು ನಿರೂಪಣೆಯನ್ನು ಮಾಡುತ್ತಿದ್ದು, ಅವರ ಮಾತುಗಳಿಂದ ನೋಡುಗರ ಮನಸ್ಸನ್ನು ಗೆದ್ದಿದ್ದಾರೆ. ಈ ಕಾರ್ಯಕ್ರಮದಲ್ಲಿ ಚಂದನವನದ ಜನಪ್ರಿಯ ಜೋಡಿಗಳಾದ ನೇಹಾ ಗೌಡ ಮತ್ತು ಚಂದನ್, ಇಶಿಕಾ ಮತ್ತು ಮುರುಗ, ಚಂದನ್ ಶೆಟ್ಟಿ ಮತ್ತು ನಿವೇದಿತಾ, ರಾಜು ತಾಳಿಕೋಟೆ ಮತ್ತು ಪ್ರೇಮಾ ಮತ್ತು ಪ್ರೇಮಾ, ಸಮೀರ್ ಆಚಾರ್ಯ ಮತ್ತು ಶರ್ವಾಣಿ ಜೋಡಿ ಸೇರಿದಂತೆ ಇನ್ನೂ ಹಲವಾರು ಭಾಗಿಯಾಗಿದ್ದಾರೆ.

ಇದನ್ನೂ ಓದಿರಿ: ಸಾಧಾರಣ ಶೀತ, ಕಫ ಸಮಸ್ಯೆಯಿಂದ ಬಳಲುತ್ತಿದ್ದರೆ ಇಲ್ಲಿದೆ ಸರಳ ಪರಿಹಾರ !

ಈ ಸೆಲೆಬ್ರೆಟಿ ಜೋಡಿಗಳ ನಡುವೆ ಕ್ರಿಕೆಟಿಗ ಅಯ್ಯಪ್ಪ ಮತ್ತು ಏನು ಅವರು ಸಹಾ ಕಾರ್ಯಕ್ರಮದಲ್ಲಿ ಒಬ್ಬ ಕಂಟೆಸ್ಟೆಂಟ್ ಆಗಿದ್ದು, ಇದುವರೆಗೆ ಉತ್ತಮವಾಗಿಯೇ ಆಟವಾಡಿಕೊಂಡು ಬಂದಿದ್ದಾರೆ. ಆದರೆ ಈ ನಡುವೆ ದಿಡೀರನೆ ಅಯ್ಯಪ್ಪ ಅವರ ಜೋಡಿ ಹೊರನಡೆದಿದ್ದು, ಅವರು ಹೊರಹೋಗಲು ಕಾರಣ ಏನಿರಬಹುದು ಎಂಬ ಕುತೂಹಲ ಉಂಟುಮಾಡಿದೆ.

ರಾಜರಾಣಿ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಜೋಡಿಗಳ ನಡುವೆಯೂ ತುಂಬಾ ಟಪ್ ಕಾಂಪಿಟೇಷನ್ ಇದ್ದು, ಯಾರು ಗೆಲ್ಲಬಹುದು ಎಂಬ ಕುತೂಹಲ ಕಾಡುತ್ತಿದೆ. ಆದರೆ ಈ ಕಾರ್ಯಕ್ರಮ ತಂಡದಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದ್ದು, ಕ್ರಿಕೆಟಿಗ ಅಯ್ಯಪ್ಪ ಮತ್ತು ಅವರ ಪತ್ನಿ ಅನು ಅವರು ದಿಡೀರ್ ಎಂದು ಕಾರ್ಯಕ್ರಮದಿಂದ ಹೊರನಡೆದಿದ್ದಾರೆ.

ರಾಜರಾಣಿ ಕಾರ್ಯಕ್ರಮದಲ್ಲಿ ಅಯ್ಯಪ್ಪ ಜೋಡಿಗೆ ಸ್ವಲ್ಪ ಮಟ್ಟಿನ ಇರಿಸು ಮುರುಸಿನ ಕೆಲ ಘಟನೆಗಳು ನಡೆದಿದ್ದು, ಬೇಸರಗೊಂಡಿದ್ದಾರೆ. ಇದಲ್ಲದೆ ಕೆಲವು ವಯಕ್ತಿಕ ಕಾರಣಗಳಿಂದಾಗಿ ಅಯ್ಯಪ್ಪ ಮತ್ತು ಅನು ದಿಡೀರ್ ಎಂದು ಕಾರ್ಯಕ್ರಮವನ್ನು ಅರ್ಧಕ್ಕೆ ಬಿಟ್ಟು ಹೊರನಡೆದಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ ಮತ್ತು ಕ್ರಿಕೆಟಿಗ ಅಯ್ಯಪ್ಪ ಮತ್ತವರ ಪತ್ನಿ ಹೀಗೆ ಜನಪ್ರೀಯ ಕಾರ್ಯಕ್ರಮವೊಂದರಿಂದ ದಿಡೀರ್ ಎಂದು ಹೊರನಡೆದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಘಟನೆಯು ನಡೆದಿರುವ ಕುರಿತು ಅವರ ಅಭಿಮಾನಿಗಳು ಬೇಸರಗೊಂಡಿರುವುದಂತೂ ಸುಳ್ಳಲ್ಲ.

ಇದನ್ನೂ ಓದಿರಿ: ನವರಾತ್ರಿಯಲ್ಲಿ ಈ ರೀತಿ ಮಾಡಿದರೆ ಅದೃಷ್ಟವೋ ಅದೃಷ್ಟ !

ನಮ್ಮನ್ನು ಪ್ರಮುಖ ತಾಣಗಳಲ್ಲಿ ಫಾಲೋ ಮಾಡಿ..

LEAVE A REPLY

Please enter your comment!
Please enter your name here