ayodhya-verdict-supreme-court-allows-construction-of-ram-mandir-on-disputed-land

ನವದೆಹಲಿ: ಹಲವು ದಶಕಗಳಿಂದ ವಿವಾದಿತ ಪ್ರಕರಣವಾಗಿ ಬೆಳೆದುಬಂದ ರಾಮಜನ್ಮಭೂಮಿಗೆ ಸಂಬಂಧಿಸಿದ ತೀರ್ಪನ್ನು ಇಂದು ಸುಪ್ರಿಂಕೋರ್ಟ್ ನೀಡಿದೆ. ಕೆಲವು ಷರತ್ತುಗಳನ್ನು ವಿಧಿಸುವ ಮೂಲಕ ವಿವಾಧಿತ 2.77 ಎಕರೆ ಜಮೀನಿನಲ್ಲಿ ರಾಮಮಂದಿರ ನಿರ್ಮಿಸಲು ಅವಕಾಶ ಮಾಡಿಕೊಟ್ಟಿದೆ.

ರಂಜನ್ ಗೊಗೋಯ್ ಅವರ ನೇತ್ರತ್ವದ ಪಂಚ ಸದಸ್ಯ ಪೀಠ ಇಂದು ರಾಮಜನ್ಮಭೂಮಿಯ ವಿವಾದಕ್ಕೆ ಅಂತ್ಯ ಹಾಡುವ ಇತಿಹಾಸಿಕ ತೀರ್ಪನ್ನು ನೀಡಿದೆ. ವಿವಾದಿತ 2.77 ಎಕರೆ ಜಮೀನಿನಲ್ಲಿ ಹಿಂದೂಗಳು ರಾಮಮಂದಿರವನ್ನು ನಿರ್ಮಿಸಲು ಅವಕಾಶವನ್ನು ಮಾಡಿಕೊಟ್ಟಿದೆ. ಇದಕ್ಕೆ ಪ್ರತಿಯಾಗಿ ಸುನ್ನಿ ವಕ್ಫ್ ಬೋರ್ಡ್ ಗೆ ಅಯೋಧ್ಯೆಯಲ್ಲಿಯೇ ಬೇರೊಂದು ಪ್ರದೇಶದಲ್ಲಿ  5 ಎಕರೆಗಳಷ್ಟು ಜಾಗವನ್ನು ನೀಡಲು ತೀಲಿಸಿದೆ.

ಇದನ್ನೂ ಓದಿರಿ:ಅಯೋಧ್ಯಾ ತೀರ್ಪು ಹಿನ್ನೆಲೆ: ಶಾಂತಿ ಕಾಪಾಡಿದ ದೇಶದ ಜನತೆಗೆ ಪ್ರಧಾನಿ ಮೋದಿ ಧನ್ಯವಾದ

ವಿವಾದಿತ ಜಾಗವನ್ನು ರಾಮಲಲ್ಲಾಗೆ ನೀಡಿರುವ ಸುಪ್ರೀಂ, ದೇವಾಲಯ ನೀರ್ಮಾಣಕಾರ್ಯವನ್ನು ಕೇಂದ್ರದ ಹೆಗಲಿಗೆ ಹೊರಿಸಿದೆ. ಈ ಭೂಮಿಯನ್ನು ಕೇಂದ್ರ ಪಡೆದುಕೊಂಡು, ದೇವಾಲಯ ನಿರ್ಮಾಣಕ್ಕಾಗಿ ಮೂರೂ ತಿಂಗಳೊಳಗೆ ಟ್ರಸ್ಟ್ ಒಂದನ್ನು ರಚಿಸಲು ತಿಳಿಸಿದೆ. ನಂತರದಲ್ಲಿ ಭೂಮಿಯನ್ನು ಟ್ರಸ್ಟ್ ಗೆ ವರ್ಗಾಯಿಸಿ, ಟ್ರಸ್ಟ್ ನ ಮೆಲುಸ್ತುವಾರಿಕೆಯಲ್ಲಿ ದೇವಾಲಯವನ್ನು ನಿರ್ಮಿಸಬೇಕು ಎಂದು ಹೇಳಿದೆ.

ಅಲ್ಲದೇ ಸುನ್ನಿ ವಕ್ಫ್ ಬೋರ್ಡ್ ಗೆ ನೀಡಿದ ಭೂಮಿಯಲ್ಲಿ ಮಸಿದಿಯನ್ನು ನಿರ್ಮಿಸಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ, ಅದರಲ್ಲಿ ಮಸೀದಿಯನ್ನು ಮಾಡಿಕೊಳ್ಳಬಹುದು ಅಥವಾ ಬೇರೆ ಉಪಯೋಗಕ್ಕೆ ಬಳಸಿಕೊಳ್ಳಬಹುದು ಎಂದು ತಿಳಿಸಿದೆ.

LEAVE A REPLY

Please enter your comment!
Please enter your name here