ayodhya-comes-alive-with-deepotsav-with-record-55-lakh-diyas-on-diwali

ಅಯೋಧ್ಯೆ: ಹಿಂದೂಗಳ ಪವಿತ್ರ ಕ್ಷೇತ್ರ ಅಯೋಧ್ಯೆಯಲ್ಲಿ ಶನಿವಾರ 5.5 ಲಕ್ಷ ದೀಪಗಳನ್ನು ಹಚ್ಚುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಾಣ ಮಾಡಲಾಗಿದೆ. ಸುಮಾರು 4 ಲಕ್ಷ ದೀಪಗಳನ್ನು ರಾಮ್ ಪೈಡಿಯಲ್ಲಿ ಬೆಳಗಿಸಿದರೆ ಇನ್ನುಳಿದವು ನಗರದ ವಿವಿಧ ದೇವಾಲಯಗಳಲ್ಲಿ ಬೆಳಗಲಾಯಿತು.

ಅಯೋಧ್ಯೆಯ ದೀಪಾವಳಿ ಹಬ್ಬದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹಿಂದಿನ ಮುಖ್ಯಮಂತ್ರಿಗಳು ಅಯೋಧ್ಯೆ ಬೇಟಿಗೆ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ನಾನು ಕಳೆದ ಎರಡೂವರೆ ವರ್ಷದಲ್ಲಿ ಒಂದು ಡಜನ್ ಗೂ ಹೆಚ್ಚುಬಾರಿ ಬಂದಿದ್ದೇನೆ ಎಂದರು. ಅಲ್ಲದೇ ಈ ಬಾರಿ ರಾಮನ ಆಳ್ವಿಕೆಯ ತ್ರೆತಾಯುಗಧ ಮರು ನಿರ್ಮಾಣವನ್ನು ಮಾಡಲಾಗಿತ್ತು. ಶ್ರೀರಾಮ ಮತ್ತು ಸೀತಾಮಾತೆಯು ಪುಷ್ಪಕ ವಿಮಾನದ ಮೂಲಕ ಸರಯೂ ನದಿಯ ದಡದಲ್ಲಿ ಇಳಿದ ದೃಶ್ಯವನ್ನು ನಿರ್ಮಾಣ ಮಾಡಿದ್ದರು.

ayodhya-comes-alive-with-deepotsav-with-record-55-lakh-diyas-on-diwali

ಅಯೋಧ್ಯೆಯ ತುಂಬೆಲ್ಲ ಮತ್ತು ರಾಮ್ ಪೈಡಿಯಲ್ಲಿ ಲಕ್ಷಗಟ್ಟಲೆ ತೈಲ ದೀಪವನ್ನು ಬೆಳಗಲಾಯಿತು. ಘಾಟ್ ನಲ್ಲಿ ಇಡಲಾಗಿದ್ದ ನಾಲ್ಕು ಲಕ್ಷ ಹತ್ತು ಸಾವಿರ ದೀಪಗಳನ್ನು ಗಿನ್ನಿಸ್ ದಾಖಲೆಗೆ ಪರಿಗಣಿಸಲಾಗಿದ್ದು, ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಪ್ರತಿನಿಧಿ ದಾಖಲೆ ಪತ್ರವನ್ನು ನೀಡಿದ್ದಾರೆ. ಅದರಲ್ಲಿ “ಉತ್ತರ ಪ್ರದೇಶ ಸರಕಾರದ ಪ್ರವಾಸೋದ್ಯಮ ಇಲಾಖೆ ಮತ್ತು ಡಾ. ರಾಮ್ ಮನೋಹರ್ ಲೋಹಿಯಾ ಅವಧ ವಿಶ್ವವಿದ್ಯಾಲಯದಿಂದ ದೀಪೋತ್ಸವ 2019 ರಲ್ಲಿ ಭಾರತದ ತೈಲ ದೀಪಗಳ ಪ್ರದರ್ಶನ ದಾಖಲಾಗಿದೆ” ಎಂದು ಬರೆಯಲಾಗಿದೆ.

ಈ ದೀಪಾವಳಿ ಹಬ್ಬದಲ್ಲಿ ಬಾಗಿಯಾಗಲು ಉತ್ತರ ಪ್ರದೇಶದ ರಾಜ್ಯಪಾಲ ಆನಂದಿ ಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ  ಆಗಮಿಸಿದ್ದರು.

ಇದನ್ನೂ ಓದಿರಿ: Bigg Boss Kannada 7 elimination: ಇವರೇ ಬಿಗ್ ಬಾಸ್​ ಮನೆಯಿಂದ ಹೊರಬಿದ್ದ 2ನೇ ಸ್ಪರ್ಧಿ..!

https://kannada.drivespark.com/off-beat/richest-indian-businessmen-and-their-private-jets-mukesh-ambani-ratan-tata-lakshmi-mittal-more-017055.html?utm_source=fb-desipearl&utm_campaign=desipearl&utm_medium=mahitikanaja

ಇದನ್ನೂ ಓದಿರಿ: ಇಂಡೋ- ಪಾಕ್ ಗಡಿಯಲ್ಲಿ ದೀಪಾವಳಿ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ..!

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here