ayodhya-babri-masjid-demolition-case-verdict-today-as-lk-advani-mm-joshi-among-key-accused

ನವದೆಹಲಿ: 1992 ರಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ನಡೆಯಲು ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾಭಾರತಿ ಸೇರಿದಂತೆ ಹಲವರ ಪರೋಕ್ಷ ಕೈವಾಡ ಇತ್ತು ಎನ್ನುವ ಆರೋಪದ ಕುರಿತಂತೆ ಇಂದು ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ನೀಡಲಿದೆ.

ಪ್ರಕರಣದಲ್ಲಿ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ , ಉಮಾ ಭಾರತಿ, ಕಲ್ಯಾಣ ಸಿಂಗ್ ಸೇರಿದಂತೆ ಒಟ್ಟು 32 ಆರೋಪಿಗಳು ಇದ್ದಾರೆ. ಈ ಎಲ್ಲ ಆರೋಪಿಗಳು ಮಸೀದಿಯನ್ನು ಧ್ವಂಸಗೊಳಿಸಲು ಪಿತೂರಿಯನ್ನು ನಡೆಸಿ ಕರಸೇವಕರನ್ನು ಪ್ರಚೋದಿಸಿದ್ದರು ಎಂದು ಸಿಬಿಐ ವಾದ ಮುಂದಿಟ್ಟಿದೆ. ಈ ಕುರಿತಂತೆ ಸಿಬಿಐ ನ್ಯಾಯಾಲಯದ ಮುಂದೆ 351 ಸಾಕ್ಷಿಗಳನ್ನು ಮತ್ತು 600 ದಾಖಲೆಗಳನ್ನು ಸಲ್ಲಿಕೆ ಮಾಡಿದೆ.

ತಮ್ಮ ಮೇಲಿರುವ ಆರೋಪವನ್ನು ತಳ್ಳಿಹಾಕಿರುವ ಆರೋಪಿಗಳು ನಾವು ಇಂತಹ ಯಾವುದೇ ಪಿತೂರಿಯನ್ನೂ ನಡೆಸಿರಲಿಲ್ಲ. ಇದು ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರದ ರಾಜಕೀಯ ಕುತಂತ್ರವಾಗಿದೆ ಎಂದು ಹೇಳಿದ್ದಾರೆ.

ಪ್ರಕರಣದ ಮೂಲವೇನು ?
ಅಯೋಧ್ಯೆ ಶ್ರೀ ರಾಮನ ಜನ್ಮಭೂಮಿಯಾಗಿದ್ದು, ಮರ್ಯಾದಾ ಪುರುಷೋತ್ತಮನ ಮಂದಿರವನ್ನು ಕೆಡವಿ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದು ಕರಸೇವಕರ ವಾದವಾಗಿತ್ತು. ಈ ಕುರಿತಂತೆ ಮಂದಿರವನ್ನು ಮತ್ತೆ ಪಡೆದೇ ತೀರುತ್ತೇವೆ ಎಂದು ಹೋರಾಟ ಸಾವಿರಾರು ಕರಸೇವಕರ ತಂಡ 1992 ಡಿಸೇಂಬರ್ 6 ರಂದು ಮಸೀದಿಯನ್ನು ಧ್ವಂಸಗೊಳಿಸಿದರು.

ಇದನ್ನೂ ಓದಿರಿ : ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಎಲ್ ಕೆ ಅಡ್ವಾಣಿ ಸೇರಿ ಎಲ್ಲಾ ಆರೋಪಿಗಳೂ ನಿರ್ದೋಷಿಗಳು

LEAVE A REPLY

Please enter your comment!
Please enter your name here